ಕೊಟ್ಟಾಯಂ: ಧಾರ್ಮಿಕ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಸ್ಥಳೀಯ ಸಮಿತಿ ಸಮಮೇಳನದ ಉದ್ಘಾಟನೆ ಕುರಿತು ಸರ್ಕಾರದ ಮುಖ್ಯ ಸಚೇತಕ ಎನ್ ಜಯರಾಜ್ ಪ್ರತಿಕ್ರಿಯಿಸಿದ್ದಾರೆ.
ಊರಿನವನು(ನಾಟ್ಟೋರುಮ) ಎಂಬ ಹೆಸರಿನಲ್ಲಿ ಪರಿಚಯಸ್ಥರು ಆಹ್ವಾನಿಸಿದ್ದು, ಪಾಪ್ಯುಲರ್ ಪ್ರಂಟ್ ನ ಆಯೋಜನೆ ಕಾರ್ಯಕ್ರಮ ಎಂದು ತಿಳಿದಾಗ ಭಾಗವಹಿಸುವುದಿಲ್ಲ ಎಂದು ತಿಳಿಸಿರುವುದಾಗಿ ಜಯರಾಜ್ ತಿಳಿಸಿದ್ದಾರೆ.
ಹೆಸರನ್ನು ತನ್ನಲ್ಲಿ ಕೇಳದೆ ಕಾರ್ಯಕ್ರಮದ ನೋಟಿಸ್‍ನಲ್ಲಿ ಹಾಕಲಾಗಿದೆ. ಆದರೆ, ನೋಟಿಸ್‍ನಲ್ಲಿ ತಮ್ಮ ಹೆಸರನ್ನು ಪ್ರಕಟಿಸಿರುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 2, 3 ಮತ್ತು 4 ರಂದು ಎನ್ ಜಯರಾಜನ್ ಉದ್ಘಾಟಿಸುವುದಾಗಿ ನೋಟಿಸ್ ಬಿಡುಗಡೆ ಮಾಡಲಾಗಿದೆ.
ಮುಖ್ಯ ಸಚೇತಕರಲ್ಲದೆ, ಕಾಂಗ್ರೆಸ್ ಪಂಚಾಯತ್ ಅಧ್ಯಕ್ಷ ಅಶ್ರಫ್ ವೆಲ್ಲೆಝಂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇವರಿಬ್ಬರ ಭಾಗವಹಿಸುವಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯೆ ನೀಡಿ, ಎಡ ಮತ್ತು ಬಲ ರಂಗಗಳು ಪೈಪೆÇೀಟಿಗಿಳಿದು ಪಾಪ್ಯುಲರ್ ಫ್ರಂಟ್ ಬೆಳೆಸುತ್ತಿವೆ. ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ಬಗ್ಗೆ ಎರಡು ಮಾತು ಹೇಳಿದ್ದಕ್ಕೆ ಮೇಯರ್ ವಿರುದ್ಧ ಕತ್ತಿ ಮಸೆಯುವವರು ಹಾಗೂ ಕೋಮುವಾದದ ಆಳ್ವಿಕೆಗೆ ಅವಕಾಶ ನೀಡುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ಸತೀಶನ ಕಂಪನಿ ಮೌನ ಉಪವಾಸ ನಡೆಸುತ್ತಿದೆ ಎಂದು ಸುರೇಂದ್ರನ್ ಟೀಕಿಸಿರುವರು.
ಪಾಪ್ಯುಲರ್ ಫ್ರಂಟ್ ಕಾರ್ಯಕ್ರಮದಲ್ಲಿ ಮುಖ್ಯ ಸಚೇತಕ ಭಾಗವಹಿಸುವುದಿಲ್ಲ; ಸ್ಥಳೀಯ ಎಂಬ ಕಾರಣ ಆಹ್ವಾನಿಸಲಾಗಿತ್ತು: ಹೆಸರು ಹಾಕುವ ಬಗ್ಗೆ ಕೇಳಿರಲಿಲ್ಲ: ವಿವರಣೆ ನೀಡಿದ ಮುಖ್ಯ ಸಚೇತನ ಎನ್.ಜಯರಾಜನ್
0
ಆಗಸ್ಟ್ 27, 2022
Tags