ನವದೆಹಲಿ:ಭಾರತದ ಭದ್ರತಾ ಕಳವಳಗಳ ನಡುವೆಯೂ ಹೊಸದಿಲ್ಲಿಯ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ ನಡೆಸಬಹುದಾದ ಚೀನಾದ ಹಡಗೊಂದು ಮಂಗಳವಾರ ಬೆಳಗ್ಗೆ ಶ್ರೀಲಂಕಾದ ಹಂಬಂಟೋಟಾ ಬಂದರಿಗೆ ಆಗಮಿಸಿದೆ (Chinese ship arrives at Sri Lanka port )ಎಂದು ಎಎಫ್‌ಪಿ ವರದಿ ಮಾಡಿದೆ.
ಯುವಾನ್ ವಾಂಗ್ 5 ಅನ್ನು ಸಂಶೋಧನೆ ಮತ್ತು ಸಮೀಕ್ಷೆಯ ಹಡಗು ಎಂದು ಇಂಟರ್ನ್ಯಾಷನಲ್ ಶಿಪ್ಪಿಂಗ್ ಹಾಗೂ ಅನಾಲಿಟಿಕ್ಸ್ ವೆಬ್‌ಸೈಟ್‌ಗಳು ವಿವರಿಸಿವೆ. ಇದು ಡ್ಯುಯಲ್-ಯೂಸ್ ಪತ್ತೇದಾರಿ ಹಡಗು ಎಂದು ಆದರೆ ಭಾರತೀಯ ಮಾಧ್ಯಮ ವರದಿಗಳು ಹೇಳುತ್ತಿವೆ.
ಈ ಹಡಗು ಆರಂಭದಲ್ಲಿ ಆಗಸ್ಟ್ 11 ರಂದು ಚೀನಾ ನಿರ್ಮಿತ ಹಾಗೂ ಗುತ್ತಿಗೆ ಪಡೆದ ಹಂಬಂಟೋಟಾ ಬಂದರಿಗೆ ಆಗಮಿಸಬೇಕಿತ್ತು, ಆದರೆ ಈ ಭೇಟಿಯನ್ನು ಮುಂದೂಡುವಂತೆ ಶ್ರೀಲಂಕಾವು ಬೀಜಿಂಗ್‌ಗೆ ಕೇಳಿಕೊಂಡಿತ್ತು. ಆದಾಗ್ಯೂ, ಆಗಸ್ಟ್ 13 ರಂದು, ಶ್ರೀಲಂಕಾವು ಆಗಸ್ಟ್ 16 ರಿಂದ ಆಗಸ್ಟ್ 22 ರವರೆಗೆ ಹಡಗನ್ನು ದ್ವೀಪದಲ್ಲಿ ಡಾಕ್ ಮಾಡಲು ಅನುಮತಿ ನೀಡಿತು.