HEALTH TIPS

ದೆಹಲಿಯ ಜಾಮಾ ಮಸೀದಿ ದೇಶದ ಅತಿದೊಡ್ಡ ಮಸೀದಿಯಲ್ಲ: ಇತಿಹಾಸಕಾರರ ಅಭಿಪ್ರಾಯ

 

          ನವದೆಹಲಿ: 'ದೆಹಲಿಯಲ್ಲಿರುವ ಜಾಮಾ ಮಸೀದಿಯು ದೇಶದ ಅತಿದೊಡ್ಡ ಮಸೀದಿಯಲ್ಲ' ಎಂದು ಹಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

             'ನಗರದಲ್ಲಿ ಅಳವಡಿಸಲಾಗಿರುವ ಹಲವು ಹೋರ್ಡಿಂಗ್‌ಗಳು ಹಾಗೂ ದೆಹಲಿ ಪ್ರವಾಸೋದ್ಯಮದ ವೆಬ್‌ಸೈಟ್‌ನಲ್ಲಿ ಜಾಮಾ ಮಸೀದಿಯನ್ನು ಅತಿದೊಡ್ಡ ಮಸೀದಿ ಎಂದು ಸಂಬೋಧಿಸಲಾಗಿದೆ.

ಆದರೆ ಈ ಶ್ರೇಯವು ಭೋಪಾಲ್‌ನಲ್ಲಿರುವ ತಾಜ್‌-ಉಲ್‌-ಮಸೀದಿಗೆ ಸೇರಬೇಕು' ಎಂದು ಇತಿಹಾಸಕಾರರು ಹೇಳಿದ್ದಾರೆ.

                 ಜಾಮಾ ಮಸೀದಿಯನ್ನು 1656ರಲ್ಲಿ ಮೊಘಲ್‌ ದೊರೆ ಶಹಾಜಹಾನ್‌ ಕಟ್ಟಿಸಿದ್ದರು. ತಾಜ್‌ ಉಲ್‌ ಮಸೀದಿಯನ್ನು ಶಹಾಜಹಾನ್‌ ಬೇಗಂ ಅವರ ಕಾಲಾವಧಿಯಲ್ಲಿ (‌1868 ರಿಂದ 1901) ನಿರ್ಮಿಸಲಾಗಿತ್ತು.

                  'ದೆಹಲಿ ಸರ್ಕಾರದವರೇ, ಜಾಮಾ ಮಸೀದಿಯು ಭಾರತದ ಅತಿದೊಡ್ಡ ಮಸೀದಿಯಲ್ಲ. ಈ ಶ್ರೇಯ ಭೋಪಾಲ್‌ನ ತಾಜ್‌ ಉಲ್‌ ಮಸೀದಿಗೆ ಸಲ್ಲುತ್ತದೆ' ಎಂದು ದೆಹಲಿಯ ಇತಿಹಾಸಕಾರ ಸೊಹೈಲ್‌ ಹಶ್ಮಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

            ದಾರುಲ್‌ ಉಲೂಮ್‌ನ ಪ್ರೊ.ಹಸನ್‌ ಖಾನ್‌ ಅವರು ಸೊಹೈಲ್‌ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries