ಕಾಸರಗೋಡು: ಪ್ರೌಢಶಾಲಾ ವಲಯದಲ್ಲಿ ಜಾರಿಗೆ ತಂದಿರುವ 1:40 ಅನುಪಾತವನ್ನು ಪುನ:ಸ್ಥಾಪಿಸುವಂತೆ ಆಗ್ರಹಿಸಿ ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ) ಕಾಸರಗೋಡು ಶಿಕ್ಷಣ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ(ಡಿಇಒ) ಕಚೇರಿ ಎದುರು ಧರಣಿ ನಡೆಸಿತು.
ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಧರಣಿ ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಪ್ರೇಮಾನಂದ ಆರ್. ವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕಾನತ್ತೂರು, ರಾಜ್ಯ ಮುಖಂಡರಾದ ಶೀಲಾಚಾಕೋ, ಕೆ.ಅನಿಲಕುಮಾರ್, ಅಶೋಕನ್ ಕೋಟೋತ್, ರಾಜ್ಯ ಉಪಸಮಿತಿ ಸದಸ್ಯರಾದ ಪಿ. ಎಸ್. ಸಂತೋಷ್ ಕುಮಾರ್, ಜೋಸ್ ಮ್ಯಾಥ್ಯೂ, ಭಾಷಾ ಅಲ್ಪಸಂಖ್ಯಾತರ ಸಂಚಾಲಕ ರಾಧಾಕೃಷ್ಣನ್, ಜಿಲ್ಲಾ ಅಧಿಕಾರಿಗಳಾದ ಗೋಪಾಲಕೃಷ್ಣನ್, ಬೆನ್ನಿ ಪಿ.ಟಿ ಉಪಸ್ಥಿತರಿದ್ದರು. ಶಿಕ್ಷಣ ಜಿಲ್ಲಾ ಕಾರ್ಯದರ್ಶಿ ಜೋಮಿ. ಟೀ ಜೋಸ್ ಸ್ವಾಗತಿಸಿ, ಕೋಶಾಧಿಕಾರಿ ವಿಮಲ್ ಕುಮಾರ್ ವಂದಿಸಿದರು.
ಕೆಪಿಎಸ್‍ಟಿಎ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ
0
ಆಗಸ್ಟ್ 13, 2022
Tags