ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಮಹೋತ್ಸವ ನಡೆಯಿತು.
ಮಹೋತ್ಸವದ ಅಂಗವಾಗಿ ನಡೆದ ಸಂಭ್ರಮದ ದಿವ್ಯಬಲಿಪೂಜೆಯಲ್ಲಿ ವಂದನೀಯ ಫಾ. ಪ್ರಕಾಶ್ ಲೋಬೋ ಕಪುಚಿನ್ ಪ್ರಧಾನ ಯಾಜಕರಾಗಿ ಭಾಗವಹಿಸಿದ್ದರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ವಿವಿಧ ಧಾರ್ಮಿಕ ವಿಧಾನಗಳಿಗೆ ನೇತೃತ್ವ ನೀಡಿದರು. ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ಹೆರಿ ಡಿಸೋಜ, ಬೋವಿಕ್ಕಾನ ಇಗರ್ಜಿಯ ಫಾ. ಸ್ಟ್ಯಾನಿಲಸ್, ಫಾ. ಬೆನೆಡಿಕ್ಟ್ ಬೋವಿಕ್ಕಾನ, ಫಾ. ರೆಜಿನಾಲ್ಡ್ ಡಿಮೆಲ್ಲೋ, ಫಾ. ರೋಶನ್ ಥೋಮಸ್, ಫಾ. ಸೆಬಾಸ್ಟಿಯನ್ ಪೀಟರ್, ಫಾ. ಸುನಿಲ್ ಲೋಬೋ ಕೊಲ್ಲಂಗಾನ, ಫಾ. ವೆಲಂಕಣಿ ರಾಜ್, ಫಾ. ಕ್ಸೇವಿಯರ್ ಡಯಸ್, ಫಾ. ರೆಜಿನಾಲ್ಡ್ ಸೀತಾಂಗೋಳಿ ಉಪಸ್ಥಿತರಿದ್ದರು.
ದಿವ್ಯಬಲಿಪೂಜೆ ಬಳಿಕ ಇಗರ್ಜಿಯ ಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾದ ಮೇರಿ ಮಾತೆಯ ಗ್ರೊಟ್ಟೋ ಆಶೀರ್ವಚನ ನಡೆಯಿತು.