ಇಡುಕ್ಕಿ: ನದಿಗಳಿಂದ ಮರಳು ತೆಗೆಯಲು ಅನುಮತಿ ನೀಡದಿರುವುದೇ ಅಣೆಕಟ್ಟುಗಳಲ್ಲಿ ದಿಢೀರ್ ನೀರು ತುಂಬಲು ಕಾರಣ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಇಡುಕ್ಕಿ ಜಿಲ್ಲಾ ಘಟಕ ಆರೋಪಿಸಿದೆ.
ಪೆÇನ್ಮುಡಿ, ಕಲ್ಲರ್ಕುಟ್ಟಿ, ಕಲ್ಲಾರ್ ಮತ್ತು ಮಲಂಕರ ಅಣೆಕಟ್ಟುಗಳು ಮಳೆಯಾದರೆ ತಕ್ಷಣವೇ ತುಂಬುತ್ತವೆ. ಕಾರಣ ಹೂಳು, ಮಣ್ಣು ಮತ್ತು ಮರಳು ತುಂಬಿಕೊಂಡಿರುವುದೇ ಅಣೆಕಟ್ಟಿನ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತದೆ. ಇವುಗಳನ್ನು ತೆಗೆಯಲು ಅನುಮತಿ ನೀಡಲು ಸಿದ್ಧರಾದರೆ ಸರಕಾರಕ್ಕೆ ಆದಾಯ ಬರಲಿದೆ, ಜನರಿಗೆ ಮರಳಿನ ಅಭಾವ ಕಡಿಮೆಯಾಗಲಿದೆ, ಕೆರೆ ಕಟ್ಟೆಗಳ ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಲಿದೆ ಎಂದು ಬೊಟ್ಟುಮಾಡಿದೆ.
ಜನರ ಜೀವ ಮತ್ತು ಆಸ್ತಿಪಾಸ್ತಿಗೆ ಆಗಿರುವ ಬೆದರಿಕೆ ದೂರವಾಗಲಿದ್ದು, ಸರಕಾರ ಕೂಡಲೇ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ಕೆವಿವಿಇಎಸ್ ಸಮಿತಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಆರ್.ವಿನೋದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾಧ್ಯಕ್ಷ ಸನ್ನಿ ಪೈಂಬಿಲ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ನಜೀಬ್ ಇಲ್ಲತ್ಪರಂಬಿಲ್, ಕೋಶಾಧಿಕಾರಿ ಆರ್. ರಮೇಶ್, ಉಪಾಧ್ಯಕ್ಷರುಗಳಾದ ವಿ.ಕೆ.ಮ್ಯಾಥ್ಯೂ, ಪಿ. ಎಂ. ಬೇಬಿ, ಸಿ. ಕೆ. ಬಾಬುಲಾಲ್, ತಂಗಚನ್ ಕೊಟ್ಟಕ್ಕಂ, ಆರ್. ಜಯಶಂಕರ್, ಸಿ.ಬಿ.ಕೊಳ್ಳಂಕುಡಿ, ಕಾರ್ಯದರ್ಶಿಗಳಾದ ವಿ. ಜೆ. ಚೆರಿಯಾರ್, ಪಿ. ಕೆ. ಶಾಹುಲ್ ಹಮೀದ್, ಶಾಜಿ ಕಂಜಮಲ, ವಿ.ಎಸ್. ಬಿಜು, ಜೋಸ್ ದಿಕ್ಕಂಡಂ, ಪಿ. ಕೆ. ಮಣಿ, ಎನ್. ಭದ್ರನ್ ಮಾತನಾಡಿದರು.
ಮರಳು ತೆಗೆಯಲು ಅನುಮತಿಸದಿರುವುದೇ ಅಣೆಕಟ್ಟುಗಳಲ್ಲಿ ದಿಢೀರ್ ನೀರು ತುಂಬಲು ಕಾರಣ: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆರೋಪ
0
ಆಗಸ್ಟ್ 07, 2022
Tags