ಕಾಸರಗೋಡು: ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯು ಕ್ಷೇತ್ರಗಳ ಎಲ್ಲಾ ಮತದಾರರನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಪ್ರತಿಯೊಬ್ಬ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಚುನಾವಣಾ ಗುರುತಿನ ಚೀಟಿಯೊಂದಿಗೆ ವೆಬ್‍ಸೈಟ್ ಡಬ್ಲು.ಡಬ್ಲು.ಡಬ್ಲು.ಎನ್.ವಿ.ಎಸ್.ಪಿ.ಇನ್ ಅಥವಾ ಓಟರ್ ಹಲ್ಪ್ ಲೈನ್ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಲಿಂಕ್ ಮಾಡಬಹುದು. ಆನ್‍ಲೈನ್‍ನಲ್ಲಿ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದವರು ಬೂತ್ ಮಟ್ಟದ ಅಧಿಕಾರಿಯ ಸೇವೆಯನ್ನು ಪಡೆಯಬಹುದು ಎಂದು ಸೂಚಿಸಲಾಗಿದೆ.
ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಸೂಚನೆ
0
ಆಗಸ್ಟ್ 22, 2022