ಮಂಜೇಶ್ವರ: ಕುಂಜತ್ತೂರು: ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದಿಂದ ಜರುಗಿತು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ.ಧ್ವಜಾರೋಹಣ ಗೈದು ಸ್ವಾತಂತ್ರ್ಯ ದಿನದ ಸಂದೇಶ ವನ್ನು ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗಿಶ್ ವಹಿಸಿದ್ದರು. ಶಾಲೆಯ ನಿವೃತ್ತ ಶಿಕ್ಷಕ ಈಶ್ವರ ,ಶಾಲೆಯ ವಿ.ಎಚ್.ಎಸ್.ಸಿ ವಿಭಾಗದ ಪ್ರಾಚಾರ್ಯರಾದ ಶಿಶುಪಾಲ,ಮಂಜೇಶ್ವರ ಪೋಲಿಸ್ ಠಾಣೆಯ ಸಿವಿಲ್ ಪೋಲಿಸ್ ಅಧಿಕಾÀರಿ ಸತೀಶನ್, ಹಿರಿಯ ಶಿಕ್ಷಕಿ ಸುಚೇತಾ, ನೌಕರ ಸಂಘದ ಕಾರ್ಯದರ್ಶಿ ಅಮಿತಾ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಸರಗೋಡು ಡಿ.ಡಿ.ಆಫೀಸ್ ನ ಜೂನಿಯರ್ ಸೂಪರಿಡೆಂಡ್ ಗೀತಾ, ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಕೆ.ಎಚ್ ಮೊಹಮ್ಮದ್, ಎಂಪಿ.ಟಿ.ಎ.ಅಧ್ಯಕ್ಷೆ ಮೋಹಿನಿ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿ ಚಂದ್ರಶೇಖರ ಉಪಸ್ಥಿತರಿದ್ದರು . ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ.ಸ್ವಾಗತಿಸಿ, ಶಿಕ್ಷಕ ದಿವಾಕರ ಬಲ್ಲಾಳ ವಂದಿಸಿದರು. ಶಿಕ್ಷಕ ರವೀಂದ್ರ ರೈ ನಿರೂಪಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.