ಕಾಸರಗೋಡು: ಮಹಾರಾಷ್ಟ್ರದಲ್ಲಿ ನಡೆದ 13 ವರ್ಷದೊಳಗಿನವರ ರಾಷ್ಟ್ರೀಯ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೇರಳ ತಂಡ ಚಾಂಪ್ಯನ್‍ಶಿಪ್ ಗಳಿಸಿದೆ. ಚಿನ್ನದ ಪದಕ ವಿಜೇತ ತಂಡದ ಪ್ರಮುಖ ಆಟಗಾರರಾಗಿ ಮುಂಚೂಣಿಯಲ್ಲಿದ್ದ ಬಾನಂ ಸರ್ಕಾರಿ ಪ್ರೌಢಶಾಲೆಯ ಅನಾಮಿಕಾ ಹರೀಶ್ ಹಾಗೂ ಪಿ. ಶ್ರವಣ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದಾರೆ. ಪೂರ್ವ ಗುಡ್ಡಗಾಡು ಪ್ರದೇಶದ ಸಾಮಾನ್ಯ ಜನರ ಮಕ್ಕಳು ಕಲಿಯುತ್ತಿರುವ ಶಾಲೆಯಿಂದ ರಾಷ್ಟ್ರೀಯ ಚಾಂಪಿಯನ್‍ಗಳು ಹೊರಹೊಮ್ಮಿರುವುದು ಶಾಲೆ ಮತ್ತು ನಾಡಿಗೆ ಹೆಮ್ಮೆ ತಂದುಕೊಟ್ಟಿದೆ. ಅನಾಮಿಕಾ ಹರೀಶ್ ಹಾಗೂ ಪಿ. ಶ್ರವಣ ಅವರನ್ನು ಶಾಲಾ ಸ್ಟಾಫ್ ಕೌನ್ಸಿಲ್, ಪಿಟಿಎ, ಮದರ್ ಪಿಟಿಎ ಮತ್ತು ಎಸ್‍ಎಂಸಿ ವತಿಯಿಂದ ಸನ್ಮಾನಿಸಲಾಯಿತು.
ಹಗ್ಗಜಗ್ಗಾಟ-ಚಾಂಪ್ಯನ್‍ಶಿಪ್ ತಂಡದಲ್ಲಿ ಕಾಸರಗೋಡಿನ ಪ್ರತಿಭೆಗಳು
0
ಆಗಸ್ಟ್ 30, 2022
Tags