ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲೇಸರ್-ನಿರ್ದೇಶಿತ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳನ್ನ (ATGM) ಕೆಕೆ ರೇಂಜ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ಸೇನೆ ಮೇನ್ ಬ್ಯಾಟಲ್ ಟ್ಯಾಂಕ್ (MBT) ಅರ್ಜುನ್‌ನಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ.
ಕ್ಷಿಪಣಿಗಳು ಅತ್ಯಂತ ನಿಖರವಾಗಿ ಎರಡು ಪ್ರತ್ಯೇಕ ಶ್ರೇಣಿಗಳಲ್ಲಿ ಗುರಿಯನ್ನು ತಲುಪಿದೆ ಎಂದು ಡಿಆರ್ ಡಿಒ ಪ್ರಕಟಣೆಯಲ್ಲಿ ತಿಳಿಸಿದೆ.
ಎಟಿಜಿಎಂ ಸ್ಫೋಟಕ ಪ್ರತಿಕ್ರಿಯಾತ್ಮಕ ರಕ್ಷಾಕವಚ (ERA) ರಕ್ಷಿತ ಶಸ್ತ್ರಸಜ್ಜಿತ ವಾಹನಗಳನ್ನ ನಿಗ್ರಹಿಸಲು ಹೈ ಎಕ್ಸ್ ಪ್ಲೋಸಿವ್ ಆಂಟಿ-ಟ್ಯಾಂಕ್ (Heat) ಸಿಡಿತಲೆಯನ್ನ ಬಳಸುತ್ತೆ. ಎಟಿಜಿಎಂ ನ್ನು ಮಲ್ಟಿ-ಪ್ಲಾಟ್ಫಾರ್ಮ್ ಉಡಾವಣಾ ಸಾಮರ್ಥ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇಸರ್ ಗೈಡೆಡ್ ಎಟಿಜಿಎಂಗಳ ಯಶಸ್ವಿ ಕಾರ್ಯನಿರ್ವಹಣೆಗಾಗಿ ಡಿಆರ್‌ಡಿಒ ಮತ್ತು ಭಾರತೀಯ ಸೇನೆಯನ್ನ ಶ್ಲಾಘಿಸಿದ್ದಾರೆ.