ವಾಷಿಂಗ್ಟನ್: ಉಕ್ರೇನ್‌ನ ಸ್ವಾತಂತ್ರ್ಯದ 31 ನೇ ವಾರ್ಷಿಕೋತ್ಸವದಂದು ಆರು ತಿಂಗಳ ಸುದೀರ್ಘ ಯುದ್ಧವನ್ನು ಪರಿಶೀಲಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬುಧವಾರ ಸಭೆ ನಡೆಸಿದೆ. ಸಭೆ ಪ್ರಾರಂಭವಾಗುತ್ತಿದ್ದಂತೆ, ರಷ್ಯಾದ ರಾಯಭಾರಿ ವಾಸಿಲಿ ಎ.
ನೆಬೆಂಜಿಯಾ ಅವರು ವೀಡಿಯೋ ಟೆಲಿ-ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಝೆಲೆನ್ಸ್ಕಿಯ ಭಾಗವಹಿಸುವಿಕೆಯ ಬಗ್ಗೆ ಕಾರ್ಯವಿಧಾನದ ಮತವನ್ನು ಕೋರಿದ್ದಾರೆ, ಈ ವೇಳೆ ಭಾರತವು ರಷ್ಯಾದ ವಿರುದ್ಧ ಮೊದಲ ಬಾರಿಗೆ ಮತ ಚಲಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಉಕ್ರೇನ್‌ನಲ್ಲಿ "ಕಾರ್ಯವಿಧಾನದ ಮತದಾನ" ಸಂದರ್ಭದಲ್ಲಿ ಭಾರತವು ಬುಧವಾರ ರಷ್ಯಾ ವಿರುದ್ಧ ಮೊದಲ ಬಾರಿಗೆ ಮತ ಚಲಾಯಿಸಿದೆ. ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದೆಡೆಗಿನ ಭಾರತದ ನಿಲುವನ್ನು ವಿರೋಧಿಸಿ ಅಮೆರಿಕ ಸೇರಿದಂತೆ ಹಲವು ದೇಶಗಳು ಪ್ರತಿಭಟಿಸಿತ್ತು. ಇದೇ ವೇಳೆ ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ಅಲ್ಲದೆ, 15 ಸದಸ್ಯರ UN ಭದ್ರತಾ ಮಂಡಳಿಯು ಈ ಸಮಯದಲ್ಲಿ ವೀಡಿಯೊ-ಟೆಲಿಕಾನ್ಫರೆನ್ಸ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಉಕ್ರೇನಿಯನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿಯನ್ನು ಆಹ್ವಾನಿಸಿತು. ಫೆಬ್ರವರಿ ತಿಂಗಳಿನಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಅಂದಿನಿಂದ ಇದೇ ಮೊದಲ ಬಾರಿಗೆ ಉಕ್ರೇನ್‌ನಲ್ಲಿ ಭಾರತ ಮೊದಲ ಬಾರಿಗೆ ರಷ್ಯಾದ ವಿರುದ್ಧ ಮತ ಚಲಾಯಿಸಿದೆ. ಉಕ್ರೇನ್ ಮೇಲಿನ ದಾಳಿಯ ನಂತರ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ. ಆದರೆ, ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿಯನ್ನು ಭಾರತ ಖಂಡಿಸಿಲ್ಲ.
ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ಮರಳಲು ಭಾರತವು ರಷ್ಯಾ ಮತ್ತು ಉಕ್ರೇನ್‌ಗೆ ಪದೇ ಪದೇ ಮನವಿ ಮಾಡಿದೆ ಮತ್ತು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಸಹಕಾರವನ್ನು ವ್ಯಕ್ತಪಡಿಸಿದೆ. ಭಾರತವು ಯುಎನ್‌ಎಸ್‌ಸಿಯಲ್ಲಿ ಎರಡು ವರ್ಷಗಳ ಕಾಲ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ. ಭಾರತದ ಅಧಿಕಾರಾವಧಿ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ.