ಮುಳ್ಳೇರಿಯ: ಸಾಮಾಜಿಕ ಸುರಕ್ಷಾ ಮಿಷನ್ ಹಾಗೂ ಮುಳಿಯಾರ್ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೇಆ ಅಂಗವಿಕಲರ ಕ್ಯಾಂಪ್ "ಸ್ನೇಹ ಸಾಂತ್ವನಂ," ನ್ನು ಉದ್ಘಾಟಿಸಿ ಶಾಸಕ ಸಿ.ಎಚ್.ಕುಞಂಬು ಮಾತನಾಡಿದರು. ಕ್ಯಾಂಪ್ ನಲ್ಲಿ ಭಾಗವಹಿಸಿದ ಎಲ್ಲ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆ ಗಳನ್ನು ಪರಿಗಣಿಸಿ ಮುಂದಿನ ಸಹಾಯವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಎಂಡೋಸಲ್ಫಾನ್ ಪಟ್ಟಿಯಲ್ಲಿ ಸೇರದಿರುವ ಮಕ್ಕಳ ಹೆತ್ತವರು ಬೇಡಿಕೆ ಸಲ್ಲಿಸಿರುವ ಹೊಸದಾಗಿ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಶಿಬಿರ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಬೋವಿಕ್ಕಾನ "ತಣಲ್ ಮಾದರಿ ಶಿಶು ಸಂರಕ್ಷಣಾ ಕೇಂದ್ರ" ಧಲ್ಲಿ ನಡೆದ ಕ್ಯಾಂಪ್ ನಲ್ಲಿ ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ವಿ. ಮಣಿ ಅಧ್ಯಕ್ಷತೆ ವಹಿಸಿದ್ದರು.
ಅಂಗವಿಕಲ ಮಕ್ಕಳಿಗಾಗಿ ಸ್ನೇಹ ಸಾಂತ್ವನಂ ಮೇಗಾ ಕ್ಯಾಂಪ್ ಸಂಪನ್ನ
0
ಆಗಸ್ಟ್ 15, 2022
Tags