ನವದೆಹಲಿ/ ತಿರುವನಂತಪುರ: ಇಸ್ಲಾಮಿಕ್ ಸ್ಟೇಟ್‍ಗಾಗಿ ಸಾವನ್ನಪ್ಪಿದ ಮೊದಲ ಭಾರತೀಯ ಮಲಯಾಳಿ ಎಂದು ಸಂಘಟನೆಯ ನಿಯತಕಾಲಿಕೆ ವಾಯ್ಸ್ ಆಫ್ ಖುರಾಸನ್ ಬಹಿರಂಗಪಡಿಸಿದೆ.
ಕೇರಳ ಮೂಲದ ಕ್ರಿಶ್ಚಿಯನ್ ಯುವಕ ಗಲ್ಫ್‍ನಲ್ಲಿ ಕೆಲಸ ಮಾಡುವಾಗ ಇಸ್ಲಾಂಗೆ ಮತಾಂತರಗೊಂಡನು. ಮತ್ತು ನಂತರ ಐಸಿಸ್ ಸೇರಿ ಲಿಬಿಯಾದಲ್ಲಿ ಹತ್ಯೆ ಯತ್ನ ನಡೆಸಿದ್ದ. ಆದರೆ ಅದರಲ್ಲಿ ಆತನ ಹೆಸರು ಅಥವಾ ಘಟನೆ ನಡೆದ ವರ್ಷ ನಮೂದಿಸಿಲ್ಲ. ಘಟನೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿದೆ.
ಐಎಸ್ ಸೇರಿದ ನಂತರ ಮಲಯಾಳಿ ಯುವಕನ ಹೆಸರು ಅಬೂಬಕರ್ ಅಲ್ ಹಿಂದಿ ಎಂದಾಗಿತ್ತು. ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಯುವಕ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಬಳಿಕ ಕೆಲಸದ ಭಾಗವಾಗಿ ಗಲ್ಫ್‍ಗೆ ತೆರಳಿದ್ದ. ಅಲ್ಲಿಂದ ಅವನು ಇಸ್ಲಾಂ ಧರ್ಮದ ಬಗ್ಗೆ ಕಲಿಯಲು ಪ್ರಾರಂಭಿಸಿದ.
ನಂತರ ಇಂಟರ್ನೆಟ್ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ. ಇದು ಇಸ್ಲಾಮಿಕ್ ಸ್ಟೇಟ್‍ನ ಅಧ್ಯಯನದೊಂದಿಗೆ ಕೊನೆಗೊಂಡಿತು. ಆತ ಅಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಆಸಕ್ತಿ ಹೊಂದಿದ್ದರೂ, ಕೆಲಸದ ಅವಧಿ ಮುಗಿದಿದ್ದರಿಂದ ಭಾರತಕ್ಕೆ ಮರಳಬೇಕಾಯಿತು. ಮನೆಯಲ್ಲಿ, ವಿವಾಹದ ಬಗ್ಗೆ ಚರ್ಚೆ ನಡೆಯಿತು. ಆದರೆ ಧರ್ಮವನ್ನು ಬದಲಾಯಿಸಿರುವ ಬಗ್ಗೆ ಯುವಕ ಕುಟುಂಬದವರಿಗೆ ಈವೇಳೆ ಬಹಿರಂಗಪಡಿಸಿದ. ಜೊತೆಗೆ ಮನೆಮಂದಿಗೂ ಮತ ಬದಲಾಯಿಸಲು ಹೇಳಿದ್ದ. ಮನೆಯವರು ಮಣಿಯದೇ ಇದ್ದಾಗ ಗಲ್ಫ್ ನಲ್ಲಿರುವ ಐಎಸ್ ಸ್ನೇಹಿತರ ಮೂಲಕ ಲಿಬಿಯಾ ಪ್ರವೇಶಿಸಿ ಬೇರೆ ಕೆಲಸಕ್ಕೆ ಸೇರುವ ನೆಪದಲ್ಲಿ ಭಯೋತ್ಪಾದಕ ಸಂಘಟನೆ ಸೇರಿದ್ದ.
ಅಬೂಬಕರ್ ಗೆ ಅಲ್ಲಿ ಭಯೋತ್ಪಾದನೆಯ ಸಮಗ್ರ ತರಬೇತಿ ನೀಡಲಾಯಿತು. ು. ಲಿಬಿಯಾದಲ್ಲಿ ನಡೆದ ಘರ್ಷಣೆಯಲ್ಲಿ ಆತ ಐಎಸ್ ಗಾಗಿ ಸಾವನ್ನಪ್ಪಿದ. ಘಟನೆ ನಡೆದ ವರ್ಷವನ್ನು ಲೇಖನದಲ್ಲಿ ಉಲ್ಲೇಖಿಸಿಲ್ಲ. ವಾಯ್ಸ್ ಆಫ್ ಖುರಾಸಾನ್‍ನ 12ನೇ ಆವೃತ್ತಿಯಲ್ಲಿ ಮಲಯಾಳಿ ಯುವಕರ ಬಗ್ಗೆ ಬಹಿರಂಗಪಡಿಸಲಾಗಿದೆ. ಕೇರಳದಲ್ಲಿ ಐಎಸ್ ಸ್ಲೀಪರ್ ಸೆಲ್‍ಗಳು ಅಸ್ತಿತ್ವದಲ್ಲಿವೆ ಎಂದು ಮಾಜಿ ಡಿಜಿಪಿ ಲೋಕನಾಥ್ ಬೆಹ್ರಾ ಅವರು ಬಹಿರಂಗಪಡಿಸಿರುವುದು ಐಎಸ್‍ನ ಹೇಳಿಕೆಗೆ ಪುಷ್ಠಿ ನೀಡಿದೆ.
ಉದ್ಯೋಗ ನಿಮಿತ್ತ ಗಲ್ಫ್‍ಗೆ ತೆರಳಿದ ಯುವಕ ಇಸ್ಲಾಂಗೆ ಮತಾಂತರ: ಐಎಸ್ ಸಂಪರ್ಕ: ಲಿಬಿಯಾದಲ್ಲಿ ಕೊನೆ: ಐಎಸ್ ಸೇರಿದ ಮೊದಲ ಭಾರತೀಯ ಕೇರಳಿಗನ ಕಥೆ ಬಹಿರಂಗಪಡಿಸಿದ ಖುರಾಸನ್
0
ಆಗಸ್ಟ್ 20, 2022