ಎಡಿನ್ ಬರ್ಗ್: ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಭಾರತದಿಂದ ಕಳವಾಗಿದ್ದ ಐತಿಹಾಸಿಕ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಗ್ಲ್ಯಾಸ್ಗೋ ಸರ್ಕಾರಗಳು ಸಹಿ ಹಾಕಿವೆ.
ಹೌದು.. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವು ಭಾರತಕ್ಕೆ ಏಳು ಕಲಾಕೃತಿಗಳನ್ನು ನೀಡುತ್ತಿದ್ದು, ಕಳವಾಗಿದ್ದ ವಸ್ತುಗಳನ್ನು ಮರಳಿಸುವಿಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
14ನೇ ಶತಮಾನದ ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಬ್ರಿಟನ್ ನಿಂದ ಮೊದಲ ಬಾರಿಗೆ ಸ್ವದೇಶಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ. ಗ್ಲ್ಯಾಸ್ಗೋ ಲೈಫ್ ನಗರದ ವಸ್ತುಸಂಗ್ರಹಾಲಯಗಳನ್ನು ನಡೆಸುವ ದತ್ತಿ ಸಂಸ್ಥೆಯಾಗಿದೆ. ಇದು ಈ ವರ್ಷದ ಆರಂಭದಲ್ಲಿ ಹಸ್ತಾಂತರವನ್ನು ದೃಢಪಡಿಸಿತು ಎನ್ನಲಾಗಿದೆ.
ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಆರು ವಸ್ತುಗಳನ್ನು 14ನೇ ಶತಮಾನದ ಕೆತ್ತನೆಗಳು ಮತ್ತು 11ನೇ ಶತಮಾನದ ಕಲ್ಲಿನ ಬಾಗಿಲು ಜಾಮ್ಗಳನ್ನು ಒಳಗೊಂಡಿವೆ. ಅವುಗಳನ್ನು 19ನೇ ಶತಮಾನದಲ್ಲಿ ದೇವಾಲಯಗಳಿಂದ ಕದಿಯಲಾಗಿತ್ತು. ಏಳನೆಯ ವಸ್ತುವು ವಿಧ್ಯುಕ್ತ ಖಡ್ಗವಾಗಿದೆ ಮತ್ತು 1905 ರಲ್ಲಿ ಹೈದರಾಬಾದಿನ ನಿಜಾಮರ ಸಂಗ್ರಹದಿಂದ ಅವರ ಪ್ರಧಾನ ಮಂತ್ರಿಯಿಂದ ಕದಿಯಲಾಗಿದೆ ಎಂದು ತಿಳಿದು ಬಂದಿದೆ.
ಸುಮಾರು ಏಳು ಐತಿಹಾಸಿಕ ಕಲಾಕೃತಿಗಳು ಭಾರತದಿಂದ ಕಳುವಾಗಿದ್ದವು. ಗ್ಲ್ಯಾಸ್ಗೋ ಮೂಲದ ವಸ್ತು ಸಂಗ್ರಹಾಲಯವೊಂದು 14 ನೇ ಶತಮಾನದ ಇಂಡೋ – ಪರ್ಷಿಯನ್ ಖಡ್ಗ ಸೇರಿದಂತೆ ಏಳು ಕಲಾಕೃತಿಗಳನ್ನು ಸ್ವದೇಶಕ್ಕೆ ಹಿಂದಿರುಗಿಸಲು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಬಿಜೆಪಿ ಮಾಹಿತಿ ಮಾಡಿದೆ.