ಕಾಸರಗೋಡು: ಬುಡಕಟ್ಟು ಜನಾಂಗದವರ ಕಲೆ ಮತ್ತು ಸಾಂಸ್ಕøತಿಕ ಪರಂಪರೆಗೆ ಸಾಕ್ಷಿಯಾಗಿ ವೆಸ್ಟ್‍ಎಳೇರಿ ಪಂಚಾಯಿತಿಯ ಭೀಮನಡಿಯಲ್ಲಿ ಬುಡಕಟ್ಟು ಉತ್ಸವ ನಡೆಯಿತು. ಆದಿವಾಸಿ ದಿನಾಚರಣೆ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಬುಡಕಟ್ಟು ಉತ್ಸವವನ್ನು ಆಯೋಜಿಸಲಾಗಿತ್ತು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಸಮಾರಂಭ ಉದ್ಘಾಟಿಸಿದರು. ವೆಸ್ಟ್‍ಎಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಮೋಹನನ್ ಅಧ್ಯಕ್ಷತೆ ವಹಿಸಿದ್ದರು.
ಆದಿವಾಸಿ ಸ್ಥಳೀಯ ಕಲಾ ಕಾರ್ಯಕ್ರಮಗಳು, ಕೋಲ್ಕಳಿ, ಮಂಗಳಂ ಕಲಿ, ಆದಿವಾಸಿ ವೈತಾರಿ ಹಾಡುಗಳು ಮುಂತಾದ ಕಲಾಪ್ರಾಕಾರ ಪ್ರದರ್ಶಿಸಲಾಯಿತು. ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳ ಪ್ರದರ್ಶನ ಹಾಗೂ ಕುಟುಂಬಶ್ರೀ ಉದ್ಯಮಗಳ ಮಾರುಕಟ್ಟೆ ಮೇಳ ನಡೆಯಿತು. ಈ ಸಂದರ್ಭದಲ್ಲಿ ಹೊಜದುರ್ಗ ಮಾಜಿ ಶಾಸಕ ಎಂ.ಕುಮಾರನ್ ಅವರನ್ನು ಸನ್ಮಾನಿಸಲಾಯಿತು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ಪೆಶಲ್ ಬ್ರಾಂಚ್ ಡಿವೈಎಸ್ಪಿ ಡಾ. ವಿ.ಬಾಲಕೃಷ್ಣನ್ ಮತ್ತು ಡಾ.ಸಿ.ಬಾಲನ್ ಮುಖ್ಯ ಭಾಷಣ ಮಾಡಿದರು. ಕುಟುಂಬಶ್ರೀ ಡಿಪಿಎಂ ಪಿ.ರತ್ನೇಶ್ ಯೋಜನೆ ಬಗ್ಗೆ ಮಾಃಇತಿ ನೀಢಿದರು. ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ವೆಸ್ಟ್ ಎಳೇರಿ ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾದ ಮೋಳಿಕುಟ್ಟಿ ಪಾಲ್, ಸಿ.ವಿ.ಅಖಿಲಾ, ಕೆ.ಕೆ.ತಂಕಚನ್, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯ ಎ.ವಿ.ರಾಜೇಶ್, ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ರಾಜೀವನ್,ಕುಟುಂಬಶ್ರೀ ಎಡಿಎಂಸಿಎಂಗಳಾದ ಡಿ.ಹರಿದಾಸ್, ಪ್ರಕಾಶನ್ ಪಾಳೈ ಉಪಸ್ಥಿತರಿದ್ದರು. ಕುಟುಂಬಶ್ರೀ ಎಡಿಎಂಸಿ ಡಿ.ಎಚ್.ಇಕ್ಬಾಲ್ ಸ್ವಾಗತಿಸಿದರು. ಸಿಡಿಎಸ್ ಅಧ್ಯಕ್ಷೆ ಸೌದಾಮಿನಿ ವಂದಿಸಿದರು. ಪರಿಶಿಷ್ಟ ಪಂಗಡಗಳಲ್ಲಿ ನುರಿತ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಪಿಎಸ್‍ಸಿ ಕೋಚಿಂಗ್ ಮೂಲಕ ಸರ್ಕಾರಿ ಉದ್ಯೋಗ ಪಡೆದ ವೈದ್ಯರು ಮತ್ತು ವಿಜೇತರನ್ನು ಸನ್ಮಾನಿಸಲಾಯಿತು.
ಬುಡಕಟ್ಟು ಜನಾಂಗದ ಕಲೆ, ಸಂಸ್ಕøತಿ ಅನಾವರಣಗೊಳಿಸಿದ ಬುಡಕಟ್ಟು ಉತ್ಸವ
0
ಆಗಸ್ಟ್ 11, 2022
Tags