ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಮೆಚ್ಚಿದ್ದಲ್ಲದೆ, ಆ ಮೂಲಕ ತಮ್ಮದೇ ದೇಶದ ಪ್ರಧಾನಿಯನ್ನು ಟೀಕಿಸಿದ ಪ್ರಸಂಗವೂ ನಡೆದಿದೆ.https://twitter.com/ShirazHassan/photo
ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ 50 ಕೆ.ಜಿ.ಫ್ರೀಸ್ಟೈಲ್ ರೆಸ್ಲಿಂಗ್ನಲ್ಲಿ ಕಂಚಿನ ಪದಕ ಗಳಿಸಿದ ಪೂಜಾ ಗೆಹ್ಲೋಟ್ ಭಾವುಕರಾಗಿ ಮಾತನಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದ ಪ್ರಸಂಗವನ್ನು ಉಲ್ಲೇಖಿಸಿ, ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್ ಪಾಕ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್ ಕೋಟ್ ಮಾಡಿರುವ ಶಿರಾಜ್, ಭಾರತ ತನ್ನ ಕ್ರೀಡಾಳುಗಳನ್ನು ಹೀಗೆ ಬಿಂಬಿಸುತ್ತಿದೆ. ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್ ಚಿನ್ನ ಗೆಲ್ಲಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಪ್ರೆಸಿಡೆಂಟ್ನಿಂದ ನಾವು ಇಂಥ ಸಂದೇಶ ನೋಡಲು ಸಾಧ್ಯವೇ? ಅಷ್ಟಕ್ಕೂ ಅವರಿಗೆ ಪಾಕ್ ಕ್ರೀಡಾಳುಗಳು ಪದಕ ಗೆಲ್ಲುತ್ತಿರುವುದು ಗೊತ್ತಿದೆಯೇ? ಎಂದು ಶಿರಾಜ್ ಪ್ರಶ್ನಿಸಿದ್ದಾರೆ.https://tw
itter.com/ShirazHassan/status/1556152524628975616?s=20&t=IAJIxxRS4AUKCrGn1VtkwQ