ಬದಿಯಡ್ಕ: ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದಭರ್Àದಲ್ಲಿ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಪರಿಸರದಲ್ಲಿ ಶನಿವಾರ ಧ್ವಜಾರೋಹಣವನ್ನು ಮಾಡಲಾಯಿತು. ಬ್ಯಾಂಕಿನ ಅಧ್ಯಕ್ಷ ಜಯಂತ ಪಾಟಾಳಿ ಧ್ವಜಾರೋಹಣಗೈದು ಮಾತನಾಡಿ, ರಾಷ್ಟ್ರಧ್ವಜದ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬರ ಮನೆ, ಮನಗಳಲ್ಲಿಯು ತಿರಂಗವು ಹಾರಾಡಲಿ, ದೇಶ ಪ್ರೇಮವು ನಿರಂತರವಾಗಿರಲಿ ಎಂದರು.
ಬ್ಯಾಂಕ್ ನ ಉಪಾಧ್ಯಕ್ಷ ಶ್ಯಾಮರಾಜ ಡಿ ಕೆ, ನಿರ್ದೇಶಕÀ ಆನಂದ ಭಂಡಾರಿ, ಗೋಪಾಲಕೃಷ್ಣ ಮುಖಾರಿ ಪೆರ್ಣೆ, ಲಕ್ಷ್ಮಿ ವಿ ಭಟ್, ಕಮಲಾಕ್ಷಿ, ಕಾರ್ಯದರ್ಶಿಗಳಾದ ಶ್ರೀಕೃಷ್ಣ ಭಟ್, ಸಿಬ್ಬಂದಿ ವರ್ಗದÀವರು ಉಪಸ್ಥಿತರಿದ್ದರು. ಬ್ಯಾಂಕ್ ನ ಸೀತಾಂಗೋಳಿ ಶಾಖೆಯಲ್ಲಿ ನಿರ್ದೇಶಕ ಜನಾರ್ಧನ ಪೂಜಾರಿ ಮತ್ತು ಕೆ ವೆಂಕಪ್ಪ ಭಟ್ ಧ್ವಜಾರೋಹಣಗೈದರು. ಶಾಖಾ ಪ್ರಬಂಧಕ ರಾಮಚಂದ್ರ, ನಿರ್ದೇಶಕರಾದ ಸುನಿಲ್ ಕುಮಾರ್, ಬಿಜು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಳತ್ತೂರು ಶಾಖೆಯಲ್ಲಿ ನಿರ್ದೇಶಕ ಎಚ್ ರಾಮ್ ಭಟ್ ಧ್ವಜಾರೋಹಣಗೈದರು. ಶಾಖಾ ಪ್ರಬಂಧಕಿ ಜ್ಯೋತಿ, ನಿರ್ದೇಶಕರಾದ ಉದಯ ಕುಮಾರ್, ಶಶಿಕಲಾ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಎಡನಾಡು ಸೇವಾ ಸಹಕಾರಿ ಬ್ಯಾಂಕ್‍ನ ವಿವಿಧ ಶಾಖೆಗಳಲ್ಲಿ ಅಮೃತ ಮಹೋತ್ಸವ ಧ್ವಜಾರೋಹಣ
0
ಆಗಸ್ಟ್ 15, 2022
Tags