HEALTH TIPS

ಅಶ್ವತಿ, ಶಾಹಿನಾ, ಅಕ್ಷಯ; ಗಾಂಜಾ ಎಂಡಿಎಂನ ಕರಾಳ ಮುಷ್ಠಿಯಲ್ಲಿ ರಾಜ್ಯ: ಮಹಿಳೆಯರು ಮತ್ತು ಯುವ ಸಮೂಹ ಮಾದಕ ಮಾರ್ಗದಲ್ಲಿ


               ಕೊಚ್ಚಿ: ಅಪರೂಪಕ್ಕೆಂಬಂತೆ ನಡೆಯುತ್ತಿದ್ದ ಕೃತಕ ಔಷಧ ವಹಿವಾಟಿಗೆ ಸಂಬಂಧಿಸಿದ ಪ್ರಕರಣಗಳು ದಿನನಿತ್ಯದ ವಿದ್ಯಮಾನವಾಗುತ್ತಿರುವುದು ಕೇರಳವನ್ನು ಬೆಚ್ಚಿ ಬೀಳಿಸಿದೆ. ಕುಟುಂಬಗಳು ಮತ್ತು ಮಹಿಳೆಯರನ್ನು ಒಳಗೊಂಡಿರುವ ಮಾದಕವಸ್ತು ಪ್ರಕರಣಗಳು ಹೆಚ್ಚುತ್ತಿವೆ ಎಂಬುದೂ ಗಮನಾರ್ಹವಾಗಿದೆ. ಗಾಂಜಾ ಸೇರಿದಂತೆ ನೈಸರ್ಗಿಕ ಅಮಲು ಪದಾರ್ಥಗಳಿಗೆ ಪೈಪೆÇೀಟಿ ನೀಡುವ ಮಾರಣಾಂತಿಕ ಸಿಂಥೆಟಿಕ್ ಡ್ರಗ್ ಎಂಡಿಎಂಎ ಅಳವಡಿಕೆ ತನಿಖಾ ತಂಡಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ.



                   ಬಲಿಪಶುಗಳು ಯುವ ಜನರು:
        ನೀರಿನೊಂದಿಗೆ ಬೆರೆಸಿ ಸೇವಿಸುವ ಎಂಡಿಎಂಎಎ ಒಮ್ಮೆ ಸೇವಿಸುವುದು ಕೂಡಾ ಹೆಚ್ಚು ವ್ಯಸನಕಾರಿ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಭಾವನಾತ್ಮಕ ಅನ್ಯೋನ್ಯತೆ ಮತ್ತು ಪರಾನುಭೂತಿಗೆ ಕಾರಣವಾಗಿರುವ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಉತ್ತೇಜಿಸುವ ಮೂಲಕ ಎಂಡಿಎಂಎ ಲೈಂಗಿಕ ಪ್ರಚೋದನೆ ಮತ್ತು ಯೂಫೆÇೀರಿಯಾವನ್ನು ನೀಡುತ್ತದೆ ಎಂಬುದು ಯುವಜನರನ್ನು ಆಕರ್ಷಿಸುತ್ತದೆ. ಆದರೆ ರಕ್ತದಲ್ಲಿ ನಶೆಯ ಮಟ್ಟ ಕಡಿಮೆಯಾದರೆ ಆಯಾಸ ಮತ್ತು ಹಸಿವಿನ ಅನುಭವವಾಗುತ್ತದೆ. ಇದರಿಂದ ಪಾರಾಗಲು ಮತ್ತೆ ನಶೆಯನ್ನು ಬಳಸುತ್ತಾರೆ. ಎಂಡಿಎಂಎ ಯ ನಿಯಮಿತ ಬಳಕೆದಾರರು ಆರೋಗ್ಯದ ತೊಂದರೆಗಳಿಂದ 10 ವರ್ಷಗಳಲ್ಲಿ ಸಾಯುವ ಸಾಧ್ಯತೆಯಿದೆ ಎಂದು ತಜ್ಞರು ಸೂಚಿಸುತ್ತಾರೆ.


                   ಪತ್ತೆಗೆ ಕಷ್ಟ:
     ಆಲ್ಕೋಹಾಲ್ ಅಥವಾ ಗಾಂಜಾ ದಂತೆ ವಾಸನೆ ಎಂಡಿಎಂಎ ಪತ್ತೆಗೆ ಇಲ್ಲದಿರುವುದು ಸಮಸ್ಯೆಯಾಗಿದ್ದು, ರಕ್ತ ಪರೀಕ್ಷೆಯಿಲ್ಲದೆ ಕಂಡುಹಿಡಿಯುವುದು ಕಷ್ಟ. ಸಿಂಥೆಟಿಕ್ ಔಷಧಗಳ ಬಳಕೆ ಹೆಚ್ಚಾಗಲು ಇದೂ ಕಾರಣ. ಅತಿ ಕಡಿಮೆ ಪ್ರಮಾಣದಲ್ಲಿ ಮಾದಕ ದ್ರವ್ಯ ಸೇವನೆ ಮಾಡುವುದರಿಂದ ಕಳ್ಳಸಾಗಣೆದಾರರಿಗೂ ಇದು ಸುಲಭವಾಗಿದೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸುವ ಔಷಧಗಳು ಇಲ್ಲಿನ ಅಡಗುದಾಣಗಳಿಂದ ಕೊರಿಯರ್ ಮೂಲಕ ಕೇರಳ ತಲುಪುತ್ತವೆ ಎನ್ನುತ್ತಾರೆ ತನಿಖಾಧಿಕಾರಿಗಳು. ಹಿಂದಿನಂತೆ ಡ್ರಗ್ಸ್ ಸೇವನೆಯ ಹೊರತಾಗಿ ಡ್ರಗ್ಸ್ ಮಾರಾಟ ಮತ್ತು ಸಾಗಾಣಿಕೆ ಮೂಲಕ ಹಣ ಗಳಿಸುವ ಕೆಲಸ ಮಾಡುವ ಗ್ಯಾಂಗ್ ಗಳಲ್ಲಿ ಮಹಿಳೆಯರೂ ಇದ್ದಾರೆ.
                  ಕೊರಿಯರ್ ಮೂಲಕ ವಹಿವಾಟು:
          ತನಿಖಾಧಿಕಾರಿಗಳ ಪ್ರಕಾರ, ಕೊರಿಯರ್ ಮೂಲಕ ಔಷಧ ಬರುವುದರಿಂದ ಗ್ರಾಹಕರು ಹಾಗೂ ಕಳ್ಳಸಾಗಣೆದಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ಕಷ್ಟವಾಗಿದೆ. ಸಾಮಾನ್ಯವಾಗಿ ಡ್ರಗ್ ಸರಪಳಿಯ ಕೊನೆಯ ಕೊಂಡಿಗಳು ಮಾತ್ರ ಸಿಕ್ಕಿಬೀಳುತ್ತವೆ. ಇದೇ ಸಂದರ್ಭದಲ್ಲಿ ಕೇರಳದಲ್ಲೂ ಅಡಗುದಾಣಗಳು ಕಾರ್ಯಾಚರಿಸುತ್ತಿದ್ದು, ವಿದೇಶದ ಮೂಲ ಪದಾರ್ಥಗಳನ್ನು ಇತರೆ ರಾಸಾಯನಿಕಗಳೊಂದಿಗೆ ಬೆರೆಸಿ ರವಾನೆಯಾಗುತ್ತಿದ್ದು ಅಮಲು ಹೆಚ್ಚಿಸುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ. ಆದರೆ ಇದುವರೆಗೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.


                         ಗುಂಪಿನಲ್ಲಿ ಯುವತಿಯರ ಉಪಸ್ಥಿತಿ ಹೆಚ್ಚಳ:
         ಮಾದಕ ವಸ್ತುಗಳ ಗ್ರಾಹಕರಲ್ಲದೆ ಮಾದಕ ವಸ್ತುಗಳ ಮಾರಾಟದಲ್ಲಿ ಮಹಿಳೆಯರ ಉಪಸ್ಥಿತಿಯೂ ಹೆಚ್ಚುತ್ತಿದೆ ಎನ್ನುತ್ತಾರೆ ಸಂಬಂಧಿಸಿದ ಅಧಿಕಾರಿಗಳು. ತೊಡುಪುಳದ 22 ವರ್ಷದ ಯುವತಿ ಅಕ್ಷಯಾ ಶಾಜಿ ತನ್ನ ಗೆಳೆಯ ಯೂನಸ್ ಜೊತೆಗೆ ಇತ್ತೀಚೆಗೆ ಎಂಡಿಎಂಎ ನೊಂದಿಗೆ ಸಿಕ್ಕಿಬಿದ್ದಿದ್ದಳು. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅಕ್ಷಯಾ ಹೇಗೆ ಮಾದಕ ವ್ಯಸನಿಯಾದಳು ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಪೆÇಲೀಸರು. ಇತ್ತೀಚೆಗμÉ್ಟೀ ತೃಕ್ಕಾಕರ ಎಂಬಲ್ಲಿ ಕಾರು ಅಪಘಾತ ಮಾಡಿ ಪೋಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ ಅಶ್ವತಿ ಬಾಬು ಅವರನ್ನೂ 2017ರಲ್ಲಿ ಎಂಡಿಎಂಎ ಜೊತೆ ಬಂಧಿಸಲಾಗಿತ್ತು. ಮಾದಕ ವ್ಯಸನಿಯಾಗಿದ್ದ ಅಶ್ವತಿ ಇದಕ್ಕಾಗಿ ಅನೈತಿಕತೆ ಮಾಡಿ ಹಣ ಸಂಪಾದಿಸುತ್ತಿದ್ದಳು ಎಂದು ಪೆÇಲೀಸರಿಗೆ ವಿವರಣೆ ನೀಡಿದ್ದಾಳೆ. ಆದರೆ 10 ಗ್ರಾಂ ಗಿಂತ ಕಡಿಮೆ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದರಿಂದ ಆಕೆಯನ್ನು ಬಳಿಕ ಬಿಡುಗಡೆ ಮಾಡಲಾಗಿತ್ತು.
                   ಗುರಿತಲಪದ ಹುಡುಕಾಟ:
        ಇದೇ ವೇಳೆ ಇಡುಕ್ಕಿ ಎಆರ್ ಕ್ಯಾಂಪ್ ನ ಪೆÇಲೀಸ್ ಅಧಿಕಾರಿ ಎಂ.ಜೆ.ಶಾನವಾಸ್ ಎಂಬಾತನನ್ನು ಎಂಡಿಎಂಎಯೊಂದಿಗೆ ಬಂಧಿಸಿರುವುದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಅಟ್ಟಹಾಸ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜುಲೈನಲ್ಲಿ, ಪಂದಳಂನಲ್ಲಿ ಮಾದಕವಸ್ತು ಮಾರಾಟಕ್ಕಾಗಿ ಯುವತಿ ಸೇರಿದಂತೆ ಐವರನ್ನು ಬಂಧಿಸಿದಾಗ, ಅವರ ಹೋಟೆಲ್ ಕೊಠಡಿಯಿಂದ 154 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಯಿತು. ಮಾದಕ ದ್ರವ್ಯ ದಂಧೆಯ ಶಂಕೆ ತಪ್ಪಿಸಲು ಮಹಿಳೆಯನ್ನು ಕರೆದುಕೊಂಡು ಬಂದಿರುವುದಾಗಿ ಆರೋಪಿ ಪೆÇಲೀಸರಿಗೆ ತಿಳಿಸಿದ್ದಾನೆ. ಕುಟುಂಬ ಎಂಬ ನೆಪದಲ್ಲಿ ಅಕ್ಕುಳಂನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಎಂಡಿಎಂಎ ವಹಿವಾಟು ನಡೆಸಿದ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬರು ಮಹಿಳೆ. ಬೆಂಗಳೂರಿನಿಂದ ಅಮಲು ಪದಾರ್ಥಗಳನ್ನು ತಂದು ಆ ಪ್ರದೇಶದಲ್ಲಿ ಮಾರಾಟ ಮಾಡುವುದು ಇವರ ವಿಧಾನವಾಗಿತ್ತು. ತ್ರಿಶೂರ್‍ನಲ್ಲಿ ಟ್ಯಾಟೂ ಸ್ಟುಡಿಯೋ ನೆಪದಲ್ಲಿ ಎಂಡಿಎಂಎ ದಂಧೆ ನಡೆಸಿದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲಾಗಿತ್ತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries