ನವದೆಹಲಿ: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅನೇಕ ರಾಜ್ಯ ಘಟಕಗಳ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆಯನ್ನು ಮುಂದುವರೆಸುವುದರೊಂದಿಗೆ ಸಾಂಸ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆಯಿದೆ.
ಇತ್ತೀಚಿಗೆ ನೂತನ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರಿಗೆ ಸ್ಥಾನ ನೀಡಿಲ್ಲ.
ಆದರೆ, ಬಿಜೆಪಿ ಅದನ್ನು ಸಾಮಾಜಿಕವಾಗಿ ಮತ್ತು ಪ್ರಾದೇಶಿಕವಾಗಿ ಹೆಚ್ಚು ಪ್ರತಿನಿಧಿಸುವಂತೆ ಮಾಡಿದೆ. ಮೊದಲ ಬಾರಿಗೆ, ಮೇಲ್ವರ್ಗಕ್ಕೆ ಸೇರದವರು ಮಂಡಳಿಯಲ್ಲಿ ಬಹುಸಂಖ್ಯಾತರಾಗಿದ್ದಾರೆ, ಏಕೆಂದರೆ ಪಕ್ಷವು ಸಾಂಪ್ರದಾಯಿಕವಾಗಿ ದುರ್ಬಲ ಮತ್ತು ಹಿಂದುಳಿದ ಸಮಾಜದ ವರ್ಗಗಳಿಗೆ ತನ್ನ ಪ್ರಾಧಾನ್ಯತೆಯನ್ನು ಮುಂದುವರೆಸಿದೆ.
ಅದಕ್ಕೂ
ಮೊದಲು ಬಿಜೆಪಿ ವರಿಷ್ಠರು ಹಲವು ರಾಜ್ಯಗಳಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಉತ್ತರ
ಪ್ರದೇಶ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ ಮತ್ತು ಬಿಹಾರದಲ್ಲಿ
ಕೆಲವು ಹೊಸ ಮುಖಗಳನ್ನು ಕರೆತರುವ ಸಾಧ್ಯತೆಯಿದೆ.
ಕಳೆದ ಕೆಲವು ವಾರಗಳಲ್ಲಿ
ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಛತ್ತೀಸ್‌ಗಢದಲ್ಲಿ ರಾಜ್ಯಾಧ್ಯಕ್ಷರನ್ನು ಬಿಜೆಪಿ
ನೇಮಿಸಿದೆ ಮತ್ತು ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ
ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಣಾಯಕ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳನ್ನು
ಬದಲಾಯಿಸಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭವಿಷ್ಯದ ಬಗ್ಗೆಯೂ
ಊಹಾಪೋಹಗಳಿವೆ.
ಪ್ರತಿಪಕ್ಷ ಕಾಂಗ್ರೆಸ್ ಪ್ರಬಲ ಶಕ್ತಿಯಾಗಿರುವ ರಾಜ್ಯದಲ್ಲಿ ಅವರ ನಾಯಕತ್ವದ ಸಾಮರ್ಥ್ಯವನ್ನು ವಿಮರ್ಶಕರು ಪ್ರಶ್ನಿಸಿದ್ದಾರೆ ಆದರೆ ಬಿಜೆಪಿ ಇದುವರೆಗೆ ಯಾವುದೇ ಬದಲಾವಣೆಯನ್ನು ತಳ್ಳಿಹಾಕಿದೆ. ವಯಸ್ಸಾದ ಆದರೆ ಇನ್ನೂ ಶಕ್ತಿಯುತವಾದ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿಕೊಳ್ಳುವ ಬಿಜೆಪಿ ನಿರ್ಧಾರ, ದಕ್ಷಿಣ ಭಾರತದ ಭದ್ರಕೋಟೆಯಲ್ಲಿ ತನ್ನ ಸಾಮಾಜಿಕ ಪ್ರಭಾವವನ್ನು ತೀಕ್ಷ್ಣಗೊಳಿಸುವ ನಿರಂತರ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ.
ಉತ್ತರ ಪ್ರದೇಶದಲ್ಲಿ ಅನೇಕ ವಿಷಯಗಳಲ್ಲಿ ಸುನೀಲ್ ಬನ್ಸಾಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಸುನೀಲ್ ಬನ್ಸಾಲ್ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ವಹಿಸಲಾಗಿದೆ.