HEALTH TIPS

ಸ್ವಾತಂತ್ರ್ಯದ ಅಮೃತ ಮಹೋತ್ಸದವ ನಿಮಿತ್ತ ನ್ಯೂಯಾರ್ಕ್​ನಲ್ಲಿ ಬೃಹತ್​ ಇಂಡಿಯಾ ಡೇ ಪರೇಡ್

 

            ನ್ಯೂಯಾರ್ಕ್​: 75 ನೇ ಸ್ವಾತಂತ್ರ ಅಮೃತ ಮಹೋತ್ಸವದ ಪ್ರಯುಕ್ತ ನ್ಯೂಯಾರ್ಕ್​ನ ಕನ್ನಡ ಕೂಟವು 'ಆಜಾದಿ ಕಾ ಅಮೃತಮಹೋತ್ಸವ' ವನ್ನು ಭಾರಿ ಸಂಭ್ರಮದಿಂದ ಆಚರಿಸುತ್ತಿದೆ. ಈ ನಿಮಿತ್ತ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ 42 ಟ್ಯಾಬ್ಲೂಗಳು ಭಾಗವಹಿಸುತ್ತಿವೆ.

                  ಫೆಡರೇಶನ್ ಆಫ್ ಇಂಡಿಯನ್ ಅಸೋಶಿಯೇಶನ್ಸ್ ( FIA) ಇದನ್ನು ಕಳೆದು 40 ವರ್ಷಗಳಿಂದ ನಡೆಸುತ್ತಾ ಬಂದಿದೆ. ಆದರೆ ಈ ವರ್ಷ ಹಿಂದಿನ ವರ್ಷಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಇಂಡಿಯಾ ಡೇ ಪರೇಡ್ ಇದಾಗಿದೆ.

                   ನ್ಯೂಯಾರ್ಕ್​ನ ಕನ್ನಡ ಕೂಟವು ಮೈಸೂರಿನ ಭವ್ಯ ಅರಮನೆಯನ್ನು ಈ ಮೆರವಣಿಗೆಯಲ್ಲಿ ಪ್ರದರ್ಶನ ಮಾಡುತ್ತಲಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್​ ಮೂಲಕ ನಮ್ಮ ಸ್ತಬ್ಧ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ ಹಾಗೂ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ.

                   ಕರ್ನಾಟಕದ ಟ್ಯಾಬ್ಲೋನಲ್ಲಿ ಮೈಸೂರು ಅರಮನೆಯ ಜತೆಗೆ ಕರ್ನಾಟಕದ ಪ್ರಖ್ಯಾತ ಇತಿಹಾಸಿಕ ಸ್ಥಳಗಳ ಚಿತ್ರಗಳಿವೆ. ಜತೆಗೆ ಕರ್ನಾಟಕದ ಜ್ಞಾನ ಪ್ರಶಸ್ತಿ ವಿಜೇತ ಸಾಹಿತಿಗಳ ಛಾಯಾಚಿತ್ರ ಪ್ರದರ್ಶನ ಕೂಡ ಇರಲಿದೆ. ನಮ್ಮ ಭವ್ಯ ಕರ್ನಾಟಕ ನಾಡಿನ ಚರಿತ್ರೆಯನ್ನು ಕದಂಬ ಚಾಲುಕ್ಯ ಹೊಯ್ಸಳ ವಿಜಯನಗರ ಸಾಮ್ರಾಜ್ಯ, ಮೈಸೂರು ಒಡೆಯರ ಇತಿಹಾಸವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

               KKNY ಅಧ್ಯಕ್ಷರಾದ ಅಜಿತ್ ಭಾಸ್ಕರ್, ನಾವಿಕ ಸಂಸ್ಥೆಯ ಉಪಾಧ್ಯಕ್ಷರಾದ ಶಿವಕುಮಾರ್ ಮತ್ತು ನಾವಿಕ ಸಂಸ್ಥೆಯ ಕಾರ್ಯದರ್ಶಿ ಬೆಂಕಿ ಬಸಣ್ಣ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಸುಧೀಂದ್ರ, ವಾಸು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries