ಕಾಡಾನೆ ದಾಳಿಯನ್ನು ಎದುರಿಸಲು ಕಾರಡ್ಕ ಬ್ಲಾಕ್ ಪಂಚಾಯಿತಿ ಆರಂಭಿಸಿರುವ ಸೌರ ಬೇಲಿ ಯೋಜನೆಯ ಮೊದಲ ಹಂತದ ಕಾಮಗಾರಿಯ ಉದ್ಘಾಟನೆಯನ್ನು ಹವಾಮಾನ ವೈಪರೀತ್ಯದಿಂದಾಗಿ ಮುಂದೂಡಲಾಗಿದೆ.
ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ದೇಲಂಪಾಡಿ ಪಂಚಾಯತ್‍ನ ಬೆಳ್ಳಕಾನದಿಂದ ಒಲಿಯಕೊಚ್ಚಿವರೆಗಿನ ಎರಡೂವರೆ ಕಿಲೋಮೀಟರ್‍ನ ಬೇಲಿಯ ಉದ್ಘಾಟನಾ ಕಾರ್ಯ ಆ. 8ರಂದು ನಡೆಯಬೇಕಿದ್ದು, ಬಿರುಸಿನ ಮಳೆಯ ಕಾರಣದಿಂದ ಮುಂದೂಡಬೇಕಗಿರುವುದಾಗಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನ: ಸೌರಬೇಲಿ ಉದ್ಘಾಟನೆ ಮುಂದೂಡಿಕೆ
0
ಆಗಸ್ಟ್ 08, 2022