ಕಾಸರಗೋಡು: ಆಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ಮಧೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಜಾದಿ ಮೆರವಣಿಗೆ ನಡೆಯಿತು. ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರ ವಠಾರದಿಂದ ಆರಂ¨ಭಗೊಂಡ ಮೆರವಣಿಗೆ ಪಂಚಾಯಿತಿಯ ಅಟಲ್‍ಜಿ ಸಭಾಂಗಣ ಬಳಿ ಸಂಪನ್ನಗೊಂಡಿತು. ಗ್ರಾಪಂ ಅಧ್ಯಕ್ಷ ಕೆ. ಗೋಪಾಲ ಕೃಷ್ಣ ಉದ್ಘಾಟಿಸಿದರು.ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೇರಳ ಸಂತೋಷ್ ಟ್ರೋಫಿಯನ್ನು ಗೆದ್ದುಕೊಂಡ ಫುಟ್ಬಾಲ್ ತಂಡದ ಫಿಸಿಯೋ ಥೆರಪಿಸ್ಟ್ ಮುಹಮ್ಮದ್ ಪಟ್ಲ ಅವರನ್ನು ಸನ್ಮಾನಿಸಲಾಯಿತು ಮಧೂರು ಪಂಚಾಯಿತಿ ವ್ಯಪ್ತಿಯ ಎಸ್ಸೆಸೆಲ್ಸಿಯಲ್ಲಿ ಎ ಪ್ಲಸ್ ಹಾಗೂ ಸಿಬಿಎಸ್‍ನಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಉಮೇಶ ಗಟ್ಟಿ, ಕೆ. ಯಶೋಧ, ಬ್ಲಾಕ್ ಪಂ. ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಮೀಲಾ ಅಹ್ಮದ್, ಗ್ರಾಪಂ ಸದಸ್ಯರು, ಗ್ರಾಮ ಪಂಚಾಯಿತಿ ವಿ. ಓ. ಪೀತಾಂಬರನ್ ಚೆರಿಪಾಡಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ. ವಿನೋದ್ ಕುಮಾರ್ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ವಿ.ಪಿ ಥಾಮಸ್ ವಂದಿಸಿದರು.
ಆಜಾದಿ ಕಾ ಅಮೃತ ಮಹೋತ್ಸವ್: ಮಧೂರಿನಲ್ಲಿ ಕಾರ್ಯಕ್ರಮ ವೈವಿಧ್ಯ
0
ಆಗಸ್ಟ್ 17, 2022