ಮಂಜೇಶ್ವರ : ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಕರ್ಕಟಕ ಮಾಸ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಯಕ್ಷಚಿಗುರು – 2022 ತಾಳಮದ್ದಳೆ ಸಪ್ತಾಹ ವಿವಿಧ ತಂಡಗಳಿಂದ ಶ್ರೀಕ್ಷೇತ್ರದಲ್ಲಿ ಜರಗುತ್ತಿದ್ದು, ದ್ವಿತೀಯದಿನ ಯಕ್ಷಬಳಗ ಹೊಸಂಗಡಿ ತಂಡದವರಿಂದ ಪಾದುಕಾಪ್ರದಾನ ತಾಳಮದ್ದಳೆ ಮನೋಜ್ಞವಾಗಿ ಮೂಡಿಬಂತು.
ಹಿಮ್ಮೇಳದಲ್ಲಿ ಭಾಗವತರು ರತ್ನಾಕರ ಆಳ್ವ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ರಾಮದಾಸ ಶೆಟ್ಟಿ ವಗೆನಾಡು, ರಾಜಾರಾಮ ಬಲ್ಲಾಳ ಚಿಪ್ಪಾರು ಭಾಗವಹಿಸಿದ್ದು, ಅರ್ಥಧಾರಿಗಳಾಗಿ ಸದಾಶಿವ ಆಳ್ವ ತಲಪಾಡಿ(ಶ್ರೀರಾಮ), ಪೆರ್ಮುದೆ ಜಯಪ್ರಕಾಶ ಶೆಟ್ಟಿ(ಭರತ), ವಿಠಲ ಭಟ್ ಮೊಗಸಾಲೆ(ವಸಿಷ್ಠ) ಸತೀಶ ಅಡಪ ಸಂಕಬೈಲು(ಲಕ್ಷ್ಮಣ)ಪಾತ್ರಧಾರಿಗಳಾಗಿ ಭಾಗವಹಿಸಿದ್ದರು.
ಚಿಗುರುಪಾದೆಯಲ್ಲಿ ಮನೋಜ್ಞವಾಗಿ ಮೂಡಿಬಂದ ಪಾದುಕಾಪ್ರದಾನ
0
ಆಗಸ್ಟ್ 12, 2022
Tags