ತಿರುವನಂತಪುರ: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೆ.ಕೆ.ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರ ನಿಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಭಾμÁ ಸಂಸ್ಥೆಯ ಉಪ ನಿರ್ದೇಶಕರ ಹುದ್ದೆಯನ್ನು ವಿಸ್ತರಿಸಲಾಗಿದೆ. ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕಗೊಂಡಿರುವ ವಿವಾದದ ನಡುವೆ ಹೊಸ ಸೂಚನೆ ನೀಡಲಾಗಿದೆ.
ಪ್ರಿಯಾ ವರ್ಗೀಸ್ ಅವರು ಮಲಯಾಳಂ ಅಸೋಸಿಯೇಟ್ ಪ್ರ್ರೊಫೆಸರ್ ಆಗಿ ನೇಮಕ ಪಟ್ಟಿಯಲ್ಲಿ ಮೊದಲ ಯಾರ್ಂಕ್ ಪಡೆದಿದ್ದಾರೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಥಮ ರ್ಯಾಂಕ್ ನೀಡಿದ್ದರೂ ಕಣ್ಣೂರು ವಿವಿ ನೇಮಕಾತಿ ಆದೇಶ ಈ ವರೆಗೆ ಹೊರಬಿದ್ದಿಲ್ಲ.
ಪ್ರಿಯಾ ಕೇರಳ ವರ್ಮ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಕಳೆದ ನವೆಂಬರ್‍ನಲ್ಲಿ ಉಪಕುಲಪತಿಗಳ ಅವಧಿ ವಿಸ್ತರಣೆಗೂ ಮುನ್ನ ಸಂದರ್ಶನ ನಡೆಸಿ ಪ್ರಥಮ ಯಾರ್ಂಕ್ ನೀಡಲಾಗಿತ್ತು. ಇದು ಕೂಡ ವಿವಾದವಾಗಿತ್ತು. ಇದರ ಬೆನ್ನಲ್ಲೇ ಯಾರ್ಂಕ್ ಪಟ್ಟಿಯನ್ನು ಮುಂದೂಡಲಾಗಿತ್ತಾದರೂ, ಕಳೆದ ತಿಂಗಳು ಸಿಂಡಿಕೇಟ್ ಪಟ್ಟಿಗೆ ಅನುಮೋದನೆ ನೀಡಲಾಗಿತ್ತು.
ಅಸೋಸಿಯೇಟ್ ಪ್ರ್ರೊಫೆಸರ್ ಆಗಿ ನೇಮಕಗೊಂಡ ನಂತರ, ಪ್ರಿಯಾ ಅವರನ್ನು ಭಾμÁ ಸಂಸ್ಥೆಯ ನಿರ್ದೇಶಕರಾಗಿ ನೇಮಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾμÁ ಸಂಸ್ಥೆಯ ಉಪ ನಿರ್ದೇಶಕರ ಹುದ್ದೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಯಿತು.
ಪ್ರಿಯಾ ವರ್ಗೀಸ್ ಅವರನ್ನು ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕ ಮಾಡಿರುವುದು ನಿಯಮಗಳಿಗೆ ವಿರುದ್ಧವಾಗಿದ್ದು, ರದ್ದುಗೊಳಿಸಬೇಕು ಎಂದು ರಾಜ್ಯಪಾಲರಿಗೆ ದೂರು ಬಂದಿತ್ತು. ಆಗ ರಾಜ್ಯಪಾಲರು ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿಗಳಿಂದ ವಿವರಣೆ ಕೇಳಿದ್ದರು. ಯುಜಿಸಿ ನಿಯಮಗಳ ಪ್ರಕಾರ ಎಂಟು ವರ್ಷಗಳ ಬೋಧನಾ ಅನುಭವವಿಲ್ಲದೆ ಪ್ರಿಯಾ ವರ್ಗೀಸ್ ಅವರಿಗೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರ ಹುದ್ದೆಗೆ ಪ್ರಥಮ ಯಾರ್ಂಕ್ ನೀಡಲಾಗಿದೆ ಎಂಬ ದೂರಲಾಗಿದೆ.
ದೂರಿನಲ್ಲಿ ರಾಜ್ಯಪಾಲರು ಕಣ್ಣೂರು ವಿಸಿ ಡಾ.ಗೋಪಿನಾಥ್ ರವೀಂದ್ರನ್ ಅವರಿಗೆ ಹತ್ತು ದಿನಗಳೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದರು. ಪ್ರಿಯಾ ವರ್ಗೀಸ್ ಗೆ ಪ್ರಥಮ ರ್ಯಾಂಕ್ ನೀಡಿದ ಪ್ರತಿಫಲವಾಗಿ ಡಾ.ಗೋಪಿನಾಥ್ ಅವರಿಗೆ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ವಿಸಿ ಆಗಿ ಮರುನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯಪಾಲರ ಮತ್ತಷ್ಟು ಮಧ್ಯಸ್ಥಿಕೆ ಬಹುಮುಖ್ಯವಾಗಿದೆ.
ಇದೇ ವೇಳೆ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಪ್ರತಿಕ್ರಿಯೆ ನೀಡಿದ್ದು, ಪ್ರಿಯಾ ವರ್ಗೀಸ್ ನೇಮಕ ಕುರಿತು ಹಲವು ಬಾರಿ ಚರ್ಚೆ ನಡೆದಿದೆ ಎಂದಷ್ಟೇ ಹೇಳಿರುವರು.
ಕೆ.ಕೆ.ರಾಗೇಶ್ ಪತ್ನಿ ಪ್ರಿಯಾ ವರ್ಗೀಸ್ ಅವರ ನಿಯೋಜನೆ ಒಂದು ವರ್ಷಕ್ಕೆ ವಿಸ್ತರಣೆ
0
ಆಗಸ್ಟ್ 10, 2022
Tags