ಚಂಡೀಗಢ: ಪಟಪಟನೆ ಬಾನೆತ್ತರ ಹಾರಾಡುವ ರಾಷ್ಟ್ರಧ್ವಜದಂತೆ ಸಾಲುಗಟ್ಟಿ ನಿಂತಿದ್ದ ಜನರ ತಂಡ ಗಿನ್ನಿಸ್ ದಾಖಲೆಯತ್ತ ಹೆಜ್ಜೆ ಹಾಕಿದೆ.
ಚಂಡೀಗಢ ವಿಶ್ವವಿದ್ಯಾನಿಲಯವು ಎನ್.ಐ.ಡಿ. ಫೌಂಡೇಶನ್ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ದಾಖಲೆಯ ಸಾಧನೆಯನ್ನು ಮುನ್ನಡೆಸಿದೆ.
ಚಂಡೀಗಢದ ಸೆಕ್ಟರ್ 16 ಸ್ಟೇಡಿಯಂನಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಯುಎಇ ನಿರ್ಮಿಸಿದ ಹಿಂದಿನ ದಾಖಲೆಯನ್ನು ಮೀರಿಸುವಂತೆ ದೇಶಕ್ಕಾಗಿ ರಾಷ್ಟ್ರಧ್ವಜವನ್ನು ಬೀಸುತ್ತಿರುವ ಚಿತ್ರವನ್ನು ದೃಶ್ಯೀಕರಿಸಲು ಸಾಲುಗಟ್ಟಿ ನಿಂತಿದ್ದರು. ಹಾರುವ ತ್ರಿವರ್ಣ ಧ್ವಜದ ರೂಪದಲ್ಲಿ 5,885 ಜನರು ಒಟ್ಟಿಗೆ ಸೇರಿದರು. ಗಿನ್ನಿಸ್ ಅಧಿಕಾರಿಗಳ ಪರವಾಗಿ ಬಂದಿದ್ದ ಸ್ವಪ್ನಿಲ್ ಧಂಗರಿಕರ್ ಅವರು ಇದನ್ನು ಅವಲೋಕನ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಉಪಸ್ಥಿತರಿದ್ದರು. ಈ ದಾಖಲೆ ಮುರಿಯುವ ಸಾಹಸಕ್ಕೆ ಸಾಕ್ಷಿಯಾಗಲು ಕ್ರಿಕೆಟ್ ಸ್ಟೇಡಿಯಂನ ಗ್ಯಾಲರಿಯಲ್ಲಿ ಸಾವಿರಾರು ಮಂದಿ ನೆರೆದಿದ್ದರು.
ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಿನ್ನೆ ಹರ್ ಘರ್ ತಿರಂಗ ಅಭಿಯಾನವನ್ನು ನಡೆಸಲಾಯಿತು. ಪ್ರತಿ ಮನೆ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ರಾಜಕೀಯ ರೇಖೆಗಳಾದ್ಯಂತ ಅನೇಕ ಪ್ರಮುಖರು ಕಾರ್ಯರೂಪಕ್ಕೆ ತಂದರು. ನಿನ್ನೆಯಿಂದ ಆಗಸ್ಟ್ 15ರವರೆಗೆ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ.
ಮಾನವ ನಿರ್ಮಿತ ರಾಷ್ಟ್ರಧ್ವಜದೊಂದಿಗೆ ಗಿನ್ನೆಸ್ ಬುಕ್ ಆಫ್ ರೆಕಾಡ್ಸ್ರ್ನ ಪಟ್ಟಿಗೆ!: ರಾಷ್ಟ್ರಧ್ವಜವನ್ನು ಬೀಸುವ ಅತಿ ದೊಡ್ಡ ಮಾನವ ಚಿತ್ರಕ್ಕಾಗಿ ಭಾರತದ ಗಿನ್ನೆಸ್ ದಾಖಲೆ
0
ಆಗಸ್ಟ್ 13, 2022
Tags