HEALTH TIPS

ಕೇರಳದ ಈ ಇಬ್ಬರು ಮುಸ್ಲಿಂ ಯುವಕರ ರಾಮಾಯಣ ಜ್ಞಾನ ಅದ್ಭುತ: ರಸಪ್ರಶ್ನೆಯಲ್ಲಿ ಗೆದ್ದು ಬೆರಗು ಹುಟ್ಟಿಸಿದ ವಿದ್ಯಾರ್ಥಿಗಳು!

 

         ಮಲಪ್ಪುರಂ: ರಾಮಾಯಣ ಹಿಂದೂಗಳ ಪವಿತ್ರ ಗ್ರಂಥ. ಹಾಗೆಂದು ಎಲ್ಲಾ ಹಿಂದೂ ಧರ್ಮದಲ್ಲಿಯೇ ಅನೇಕರಿಗೆ ರಾಮಾಯಣ ಬಗ್ಗೆ ತಿಳಿದಿದೆ ಎಂದು ಹೇಳಲು ಸಾಧ್ಯವಿಲ್ಲ.

           ಕೇರಳದಲ್ಲೊಬ್ಬ ಮುಸ್ಲಿಂ ಯುವಕ ರಾಮಾಯಣ ಗ್ರಂಥದ ಬಗ್ಗೆ ಅರೆದು ಕುಡಿದಿದ್ದಾರೆ ಎಂದು ಹೇಳಿದರೆ ತಪ್ಪಿಲ್ಲ. ಮೊಹಮ್ಮದ್ ಬಸಿತ್ ಎಂಬ ಯುವಕನ ಬಳಿ ರಾಮಾಯಣದಿಂದ ನಿಮ್ಮ ಇಷ್ಟದ ಶ್ಲೋಕ ಹೇಳಿ ಎಂದು ಕೇಳಿದರೆ ಹಿಂದೆಮುಂದೆ ಯೋಚಿಸದೆ ಅಯೋಧ್ಯೆ ಕಾಂಡದ ಪದ್ಯಗಳನ್ನು ನಿರರ್ಗಳವಾಗಿ ಪಠಿಸುತ್ತಾರೆ. 

                    ರಾಮಾಯಣದಲ್ಲಿ ಅಯೋಧ್ಯೆ ಕಾಂಡ ಲಕ್ಷ್ಮಣನ ಸಿಟ್ಟು ಅದಕ್ಕೆ ರಾಮ ಅಧಿಕಾರ ಮತ್ತು ರಾಜ್ಯ ಶಾಶ್ವತವಲ್ಲ ಎಂದು ತಮ್ಮನನ್ನು ಸಮಾಧಾನಪಡಿಸುವ ಬಗ್ಗೆ ವಿವರಿಸುತ್ತದೆ.

               ತುಂಚತು ರಾಮಾನುಜನ್ ಎಝುತಾಚನ್ ಬರೆದ ಮಹಾಕಾವ್ಯದ ಮಲಯಾಳಂ ಆವೃತ್ತಿಯಾದ 'ಆಧ್ಯಾತ್ಮ ರಾಮಾಯಣ'ದ ಪದ್ಯಗಳನ್ನು ನಿರರ್ಗಳವಾಗಿ ಮತ್ತು ಸುಲಲಿತವಾಗಿ ನಿರೂಪಿಸುವುದು ಮಾತ್ರವಲ್ಲದೆ ಪವಿತ್ರ ಸಾಲುಗಳ ಅರ್ಥ ಮತ್ತು ಸಂದೇಶವನ್ನು ವಿವರವಾಗಿ ಮೊಹಮ್ಮದ್ ವಿವರಿಸುತ್ತಾರೆ.

              ಮಹಾನ್ ಮಹಾಕಾವ್ಯದ ಬಗ್ಗೆ ಈ ಯುವಕನ ಆಳವಾದ ಜ್ಞಾನವು ಬಸಿತ್ ಮತ್ತು ಅವರ ಕಾಲೇಜು ಸಹಪಾಠಿ-ಸ್ನೇಹಿತ ಮೊಹಮ್ಮದ್ ಜಬೀರ್ ಪಿ ಕೆ ಅವರು ಪ್ರಮುಖ DC ಬುಕ್ಸ್ ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆಸಿದ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಲು ಸಹಾಯ ಮಾಡಿದೆ.

                ಉತ್ತರ ಕೇರಳ ಜಿಲ್ಲೆಯ ವಲಂಚೇರಿಯಲ್ಲಿರುವ KKSM ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನ ಎಂಟು ವರ್ಷದ ಕೋರ್ಸ್ ವಾಫಿಯ ಐದನೇ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಸಿತ್ ಮತ್ತು ಜಬೀರ್, ಕಳೆದ ತಿಂಗಳು ನಡೆದ ರಸಪ್ರಶ್ನೆಯಲ್ಲಿ ಐವರು ವಿಜೇತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

              ರಾಮಾಯಣ ಕುರಿತ ರಸಪ್ರಶ್ನೆಯಲ್ಲಿ ಇಸ್ಲಾಮಿಕ್ ಕಾಲೇಜು ವಿದ್ಯಾರ್ಥಿಗಳು ಗಳಿಸಿದ ಗೆಲುವು ಮಾಧ್ಯಮಗಳ ಗಮನವನ್ನು ಸೆಳೆಯಿತು, ಹಲವರು ಇವರಿಬ್ಬರನ್ನು ಅಭಿನಂದಿಸಲು ಪ್ರಾರಂಭಿಸಿದರು. 

                ಬಾಲ್ಯದಿಂದಲೂ ಮಹಾಕಾವ್ಯದ ಬಗ್ಗೆ ತಿಳಿದಿದ್ದರೂ, ವಾಫಿ ಕೋರ್ಸ್‌ಗೆ ಸೇರಿದ ನಂತರ ರಾಮಾಯಣ ಮತ್ತು ಹಿಂದೂ ಧರ್ಮದ ಬಗ್ಗೆ ಆಳವಾಗಿ ಓದಲು ಮತ್ತು ಕಲಿಯಲು ಪ್ರಾರಂಭಿಸಿದರು, ಅದರ ಪಠ್ಯಕ್ರಮವು ಎಲ್ಲಾ ಪ್ರಮುಖ ಧರ್ಮಗಳ ಬೋಧನೆಗಳನ್ನು ಹೊಂದಿದೆ. ವಿಶಾಲವಾದ ಕಾಲೇಜು ಗ್ರಂಥಾಲಯವು ಇತರ ಧರ್ಮಗಳ ಪುಸ್ತಕಗಳ ದೊಡ್ಡ ಸಂಗ್ರಹವನ್ನು ಹೊಂದಿದೆ, ಇದು ಮಹಾಕಾವ್ಯಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಜಬೀರ್ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

                 ಎಲ್ಲಾ ಭಾರತೀಯರು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಓದಬೇಕು, ಕಲಿಯಬೇಕು ಏಕೆಂದರೆ ಅವು ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸದ ಭಾಗವಾಗಿದೆ. ಈ ಪಠ್ಯಗಳನ್ನು ಕಲಿಯುವುದು ಮತ್ತು ಅರ್ಥಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನಂಬುತ್ತೇನೆ ಎನ್ನುತ್ತಾರೆ ಜಬೀರ್. 

.           ಶ್ರೀರಾಮ ತನ್ನ ಪ್ರೀತಿಯ ತಂದೆ ದಶರಥನಿಗೆ ನೀಡಿದ ಭರವಸೆಯನ್ನು ಈಡೇರಿಸಲು ತನ್ನ ರಾಜ್ಯವನ್ನು ಸಹ ತ್ಯಾಗ ಮಾಡಬೇಕಾಯಿತು. ಅಧಿಕಾರಕ್ಕಾಗಿ ಕೊನೆಯಿಲ್ಲದ ಹೋರಾಟದ ಅವಧಿಯಲ್ಲಿ ನಾವು ರಾಮನಂತಹ ಪಾತ್ರಗಳಿಂದ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಸಂದೇಶದಿಂದ ಸ್ಫೂರ್ತಿ ಪಡೆಯಬೇಕು ಎಂದು 22 ವರ್ಷದ ಜಬೀರ್ ಹೇಳುತ್ತಾರೆ. 

          ಸಮಗ್ರ ಓದುವಿಕೆ ಇತರ ನಂಬಿಕೆಗಳನ್ನು ಆ ಸಮುದಾಯಗಳಿಗೆ ಸೇರಿದ ಜನರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಸಿತ್ ಅಭಿಪ್ರಾಯಪಟ್ಟರು. ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ ಶಾಂತಿ ಮತ್ತು ಸೌಹಾರ್ದತೆಯನ್ನು ಮಾತ್ರ ಪ್ರಚಾರ ಮಾಡುತ್ತದೆ, ರಸಪ್ರಶ್ನೆಯಲ್ಲಿ ಗೆಲ್ಲುವುದು ಮಹಾಕಾವ್ಯವನ್ನು ಹೆಚ್ಚು ಆಳವಾಗಿ ಕಲಿಯಲು ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries