ಕೊಚ್ಚಿ: ಕೋಝಿಕ್ಕೋಡ್ ನಲ್ಲಿ ಬಾಲಗೋಕುಲ ಮಾತೃ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇಯರ್ ಬೀನಾ ಫಿಲಿಪ್ ವಿರುದ್ಧ ಸಿಪಿಎಂ ನಿಲುವು ಹೇಡಿತನ ಎಂದು ಬಿಜೆಪಿ ಹೇಳಿದೆ.
ಆರ್ ಎಸ್ ಎಸ್ ವಿರುದ್ಧ ಮಾತನಾಡುವ ಕಮ್ಯುನಿಸ್ಟರಿಗೆ ಮುಸ್ಲಿಂ ಧಾರ್ಮಿಕ ಮುಖಂಡರÀ ಹೆಗಲ ಮೇಲೆ ಕೈ ಹಾಕುವ ಔಚಿತ್ಯ ಅರ್ಥವಾಗುತ್ತಿಲ್ಲ. ಸಂಘಟಿತ ಧಾರ್ಮಿಕ ಮತ ಬ್ಯಾಂಕ್‍ಗೆ ವ್ಯಸನಿಯಾಗಿರುವ ಸಿಪಿಎಂ ರಾಜ್ಯದಲ್ಲಿ ಭಯೋತ್ಪಾದಕರಿಗೆ ಬೆಳೆಯಲು ಅವಕಾಶ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು.
ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಅಬ್ದುಲ್ ನಾಸರ್ ಮದನಿ ಜತೆ ಜಮಾತೆ ಇಸ್ಲಾಮಿ ಜತೆಗೂಡಿ ವೇದಿಕೆ ಹಂಚಿಕೊಂಡಿರುವುದು ಮುಸ್ಲಿಂ ಮತ ಬ್ಯಾಂಕ್ ಗೆ ಸಾಕ್ಷಿಯಾಗಿದೆ. ಕೇರಳದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತು ಮತ್ತು ನೆರವು ನೀಡುವ ಮೂಲಕ ಸಿಪಿಎಂ ಮುಸ್ಲಿಂ ಸಮುದಾಯವನ್ನು ಗುಲಾಮರನ್ನಾಗಿ ಮಾಡಿದೆ. ಅಭಿಮನ್ಯು ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತನನ್ನು ಇಲ್ಲಿಯವರೆಗೂ ಏಕೆ ಬಂಧಿಸಿಲ್ಲ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬಾಂಬ್ ಸ್ಫೋಟದ ನಂತರ, ಎಸ್‍ಡಿಪಿಐ ಮುಖಂಡರು ಎಕೆಜಿ ಸೆಂಟರ್‍ಗೆ ಭೇಟಿ ನೀಡಿದ್ದು, ಅವರ ನಡುವಿನ ಸಂಬಂಧವನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ವಕ್ಪ್ ಬೋರ್ಡ್ ನೇಮಕಾತಿಯನ್ನು ಪಿ ಎಸ್ ಸಿ ಪಟ್ಟಿಯಿಂದ ತೆಗೆದುಹಾಕಿರುವುದು ಮತ್ತು ಮುಸ್ಲಿಂ ಜಮಾತ್ ನ ಪ್ರತಿಭಟನೆಯ ನಂತರ ಶ್ರೀರಾಮ್ ವೆಂಕಟ ರಾಮನ್ ಅವರನ್ನು ಆಲಪ್ಪುಳ ಜಿಲ್ಲಾಧಿಕಾರಿ ಸ್ಥಾನದಿಂದ ತೆಗೆದುಹಾಕಿರುವುದು ಸಿಪಿಎಂ ಸಂಘಟಿತ ಧಾರ್ಮಿಕ ಮತದ ಭಯವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಉಗ್ರವಾದಕ್ಕೆ ಬಿಳಿ ಬಣ್ಣ ಬಳಿದು ಬಾಲಗೋಕುಲದÀಂತಹ ಸಾಂಸ್ಕøತಿಕ ರಾಷ್ಟ್ರೀಯತೆಯನ್ನು ಸಾರುವ ಮೇಯರ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಸಿಪಿಎಂನ ದ್ವಂದ್ವ ನೀತಿಯನ್ನು ಜನತೆ ಅರಿತುಕೊಳ್ಳಬೇಕು ಎಂದರು.
ಸಿಪಿಎಂ ಸಂಘಟಿತ ಧಾರ್ಮಿಕ ಮತಬ್ಯಾಂಕ್ ಗೆ ತಲೆಬಾಗಿದೆ: ಬಿ.ಜೆ.ಪಿ
0
ಆಗಸ್ಟ್ 10, 2022
Tags