ಕೊಚ್ಚಿ: ನಕಲಿ ಪಾಸ್‍ಪೋರ್ಟ್‍ನೊಂದಿಗೆ ದೇಶ ಬಿಡಲು ಯತ್ನಿಸಿದ ನಾಲ್ವರು ಬಾಂಗ್ಲಾದೇಶೀಯರು ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಸಮೀರ್ ರಾಯ್, ರಾಯ್ ಅರು, ರಾಯ್ ಅನಿಕತ್ ಮತ್ತು ನಿಮೈದಾಸ್ ಬಂಧಿತರು. ಆರೋಪಿಗಳು ಶಾರ್ಜಾಕ್ಕೆ ಏರ್ ಇಂಡಿಯಾ ವಿಮಾನ ಹತ್ತಲು ಭಾರತೀಯ ಪ್ರಜೆ ಎಂಬ ನೆಪದಲ್ಲಿ ಆಗಮಿಸಿದ್ದರು.
ಬಾಂಗ್ಲಾದೇಶದ ಪ್ರಜೆಗಳನ್ನು ಗಲ್ಫ್‍ನಲ್ಲಿನ ಉದ್ಯೋಗಗಳಿಗೆ ಪರಿಗಣಿಸಲಾಗುವುದಿಲ್ಲ. ಇದರ ಬೆನ್ನಲ್ಲೇ ಭಾರತದ ಮೂಲಕ ಕೊಲ್ಲಿ ರಾಷ್ಟ್ರಗಳಿಗೆ ತಲುಪಿಸಲಾಗುತ್ತಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ. ಪಾಸ್‍ಪೆÇೀರ್ಟ್ ಒರಿಜಿನಲ್ ಆಗಿದ್ದರೂ ಅದನ್ನು ನಕಲಿ ಮಾಹಿತಿ ನೀಡಿ ವರ್ಗೀಕರಿಸಲಾಗಿದೆ ಎಂದು ಪೆÇಲೀಸರು ಊಹೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ನೆಡುಂಬಶ್ಶೇರಿ ಪೆÇಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಸಮೀರ್ ರಾಯ್ ಎಂಬಾತ ನಕಲಿ ವಿಳಾಸದಲ್ಲಿ ಪಾಸ್ ಪೆÇೀರ್ಟ್ ತೆಗೆದುಕೊಂಡಿರುವ ಬಗ್ಗೆ ಎಮಿಗ್ರೇಶನ್ ನಿಂದ ಮಾಹಿತಿ ಲಭಿಸಿದೆ. ನಂತರದ ವಿಚಾರಣೆಯಲ್ಲಿ ಇನ್ನೂ ಮೂವರನ್ನು ಬಂಧಿಸಲಾಯಿತು.
ನಕಲಿ ಪಾಸ್‍ಪೋರ್ಟ್‍ನೊಂದಿಗೆ ದೇಶವನ್ನು ತೊರೆಯುವ ಪ್ರಯತ್ನ: ಕೊಚ್ಚಿಯಲ್ಲಿ ನಾಲ್ವರು ಬಾಂಗ್ಲಾದೇಶೀಯರ ಬಂಧನ
0
ಆಗಸ್ಟ್ 28, 2022
Tags