ಕಾಸರಗೋಡು: 2022ನೇ ಸಾಲಿನ ರಾಷ್ಟ್ರೀಯ ಸಬ್ ಜೂನಿಯರ್-ಜೂನಿಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಕಾಸರಗೋಡು ನಗರಸಭಾ ಆಡಿಟೋರಿಯಂನಲ್ಲಿ ಗುರುವಾರ ಆರಂಭಗೊಂಡಿತು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಎನ್.ಎ ನೆಲ್ಲಿಕುನ್ ಚಾಂಪಿಯನ್‍ಶಿಪ್ ಉದ್ಘಾಟಿಸಿದರು. ಕಾಞಂಗಾಡು ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭೆ ಉಪಾಧ್ಯಕ್ಷೆ ಶಂಸಿದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬೇಗಂ, ಖಾಲಿದ್‍ಪಚ್ಚಕ್ಕಾಡ್, ಸಿಯಾನಾ ಹನೀಫ್, ರಜಿನಿ ಕೆ, ನಗರಸಭಾ ಸದಸ್ಯರು, ಅಶ್ರಫ್ ಎಟ್ನೀರ್, ಪವರ್ ಲಿಫ್ಟಿಂಗ್ ಇಂಡಿಯಾ ಅಧ್ಯಕ್ಷ ರಾಜೇಶ್ ತಿವಾರಿ, ಕಾರ್ಯದರ್ಶಿ ಪಿ.ಜೆ.ಜೋಸೆಫ್ (ಅರ್ಜುನ), ರಾಜ್ಯಾಧ್ಯಕ್ಷ ಪಿ.ಎಸ್.ಬಾಬು, ಕಾರ್ಯದರ್ಶಿ ವೇಣು ಜಿ.ನಾಯರ್, ಜುನೈದ್ ಅಹಮದ್ ಉಪಸ್ಥಿತರಿದ್ದರು.
ಕಾಸರಗೋಡು ನಗರಸಭಾ ಅಧ್ಯಕ್ಷ, ಸ್ವಾಗತಸಮಿತಿ ಕಾರ್ಯಾಧ್ಯಕ್ಷ ವಕೀಲ ವಿ.ಎಂ. ಮುನೀರ್ ಸ್ವಾಗತಿಸಿದರು. ಕಾಸರಗೋಡು ನಗರಸಭೆ ಮತ್ತು ಜಿಲ್ಲಾ ಪವರ್‍ಲಿಫ್ಟಿಂಗ್ ಅಸೋಸಿಯೇಷನ್ ಜಂಟಿಯಾಗಿ ಚಾಂಪಿಯನ್‍ಶಿಪ್ ಆಯೋಜಿಸಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೃಹತ್ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ.ಆಗಸ್ಟ್ 14ರ ವರೆಗೆ ಚಾಂಪ್ಯನ್‍ಶಿಪ್ ನಡೆಯಲಿದ್ದು, ಪಂದ್ಯಗಳು ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯಲಿದೆ.
ರಾಷ್ಟ್ರೀಯ ಸಬ್ ಜೂನಿಯರ್, ಜೂನಿಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಉದ್ಘಾಟನೆ
0
ಆಗಸ್ಟ್ 12, 2022
Tags