ಕಾಸರಗೋಡು: ಮನೆಯವರನ್ನು ಹೆದರಿಸಲು ನೇಣು ಬಿಗಿದುಕೊಂಡಂತೆ ನಟಿಸುತ್ತಿದ್ದ ಯುವಕನೊಬ್ಬನ ಕುತ್ತಿಗೆಗೆ ಬಟ್ಟೆ ಸಿಲುಕಿ ಸಾವನ್ನಪ್ಪಿದ್ದಾನೆ. ಪಾಣತ್ತೂರು ಮಾವುಂಗಾಲ್ ಮೂಲದ ಹರಿದಾಸ್ (40) ಮೃತರು. ಭಾನುವಾರ ರಾತ್ರಿ ಮನೆಯಲ್ಲಿ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ಹರಿದಾಸ್ ಮನೆಯವರೊಂದಿಗೆ ಜಗಳವಾಡಿದ್ದ. ಪತ್ನಿಯನ್ನು ಹೆದರಿಸಲು ಮಲಗುವ ಕೋಣೆಯಲ್ಲಿದ್ದ ಕಿಟಕಿಯ ಸರಳಿಗೆ ಬಟ್ಟೆಯ ತುಂಡನ್ನು ಕಟ್ಟಿ ಕುತ್ತಿಗೆಗೆ ಹಾಕಿದ್ದಾನೆ. ಇದೇ ವೇಳೆ ಆಕಸ್ಮಿಕವಾಗಿ ಕೊರಳಿಗೆ ಬಟ್ಟೆ ಸಿಕ್ಕಿಕೊಂಡಿದೆ ಎಂದು ವರದಿಯಾಗಿದೆ. ಈ ಹಿಂದೆ ಹಲವು ಬಾರಿ ನೇಣು ಬಿಗಿದುಕೊಂಡು ಸಾಯುವ ನಾಟಕವಾಡಿ ್ನ ಕುಟುಂಬದವರು ಬೆದರಿಸಿದ್ದ. ಹಾಗಾಗಿ ಈ ಘಟನೆಯನ್ನು ಮನೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಬಳಿಕ ಆಟ ಗಂಭೀರವಾಗಿದೆ ಎಂದು ತಿಳಿದ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಕಟ್ಟಡ ಕಾರ್ಮಿಕನಾಗಿದ್ದ ಹರಿದಾಸ್ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎಂದು ಕುಟುಂಬಸ್ಥರು ಹೇಳುತ್ತಾರೆ.
ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸೋಮವಾರ ಸಂಜೆ ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇವರು ಕೋಟಾನ್- ಕಾರ್ತಿಯಾನಿ ದಂಪತಿಯ ಪುತ್ರ. ಪತ್ನಿ ಜಿನಾ. ಆದರ್ಶ್ ಮತ್ತು ಆಕಾಶ್ ಪುತ್ರರು. ಸಹೋದರ ರತೀಶ್ ಅವರನ್ನು ಅಗಲಿದ್ದಾರೆ.
ತನ್ನ ಕುಟುಂಬವನ್ನು ಹೆದರಿಸಲು ನೇಣು ಬಿಗಿದುಕೊಂಡಂತೆ ನಟಿಸಿದ ಯುವಕನ ಕುತ್ತಿಗೆಗೆ ಬಿಗಿದ ಬಟ್ಟೆ ಬಿಗಿಗೊಂಡು ಯುವಕ ಸಾವು: ಮಾವುಂಗಾಲಲ್ಲಿ ಘಟನೆ
0
ಆಗಸ್ಟ್ 30, 2022