ಕೋಝಿಕ್ಕೋಡ್: ಬಾಲಗೋಕುಲದ ಮಾತೃವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇಯರ್ ಬೀನಾ ಫಿಲಿಪ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಸಾಧ್ಯತೆಗಳಿವೆ. ಒಂದು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡ ಮೇಯರ್ ಅನುಭವದ ಕೊರತೆಯನ್ನು ಪರಿಗಣಿಸಿ ಕ್ರಮ ಕೈಗೊಳ್ಳದಿರಲು ಸಿಪಿಎಂ ನಿರ್ಧರಿಸಿದೆ. ಜಿಲ್ಲಾ ಸಮಿತಿಯು ಮೇಯರ್ ವಿರುದ್ಧ ಸಾರ್ವಜನಿಕವಾಗಿ ನಿಲುವು ತಳೆದಿರುವುದರಿಂದ, ಪದಾಧಿಕಾರಿಗಳಲ್ಲಿ ಯಾವುದೇ ಗೊಂದಲ ಉಂಟಾಗದಿರಬಹುದು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.
ಜಿಲ್ಲಾ ಕಾರ್ಯದರ್ಶಿ ಸಮಜಾಯಿಷಿ ನೀಡಿದ ನಂತರವೂ ಜಿಲ್ಲಾ ನಾಯಕತ್ವ ಮತ್ತಷ್ಟು ಹೇಳಿಕೆ ನೀಡುವಲ್ಲಿ ತೃಪ್ತವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ. ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಕೋಝಿಕ್ಕೋಡ್ ಜಿಲ್ಲಾ ಸಮಿತಿಯು ಮೇಯರ್ ಅವರಿಗೆ ಸೋಮವಾರ ಮಾಹಿತಿ ನೀಡಿತ್ತು.
ಅನುಭವದ ಕೊರತೆಯಿಂದ ಮೇಯರ್ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸಿಪಿಎಂ ಸಮರ್ಥಿಸಿದೆ. ಆದರೆ ಕಾರ್ಯಕ್ರಮದಲ್ಲಿ ಮೇಯರ್ ನೀಡಿದ ಹೇಳಿಕೆ ಸರಿಯುಲ್ಲ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ. ಒಂದು ವರ್ಷದ ಹಿಂದೆಯμÉ್ಟೀ ಮೇಯರ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಅಂಶವನ್ನು ಪರಿಗಣಿಸಲಾಗುವುದು.
ಮಂಗಳವಾರ ನಡೆದ ಕ್ವಿಟ್ ಇಂಡಿಯಾ ಪ್ರತಿಭಟನೆಯ ವಾರ್ಷಿಕೋತ್ಸವದಿಂದಲೂ ಮೇಯರ್ ದೂರ ಉಳಿದಿದ್ದರು. ಬದಲಿಗೆ ಶಾಸಕ ರವೀಂದ್ರನ್ ಭಾಗವಹಿಸಿದರು. ಮೇಯರ್ ಮತ್ತೊಂದು ಅಧಿಕೃತ ಕಾರ್ಯಕ್ರಮ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದು ವಿವರಣೆ ನೀಡಲಾಗಿದೆ. ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಮೇಯರ್ ಸಮಾಲೋಚನೆ ನಡೆಸಬೇಕಿತ್ತು ಎಂದು ಶಾಸಕ ತೋಟತ್ತಿಲ್ ರವೀಂದ್ರನ್ ಹೇಳಿದ್ದಾರೆ.
ಇನ್ನು ಬಾಲಗೋಕುಲದ ಕಾರ್ಯಕ್ರಮದಲ್ಲಿ ಮೇಯರ್ ಪಾಲ್ಗೊಂಡ ವಿವಾದ ಕುರಿತು ಜಿಲ್ಲಾ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಎಲ್ ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಹೇಳಿಕೆ ನೀಡಿದ್ದರು. ರಾಜ್ಯ ಕಾರ್ಯದರ್ಶಿಗಳ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಮೇಯರ್‍ಗೆ ಛೀಮಾರಿ ಹಾಕಲು ಸಿದ್ಧವಾಗಿದೆ ಎಂದು ತಿಳಿಸಲಾಗಿದೆ.
ಕೋಝಿಕ್ಕೋಡ್ ಮೇಯರ್ ವಿರುದ್ಧ ಆತುರದ ಕ್ರಮವಿಲ್ಲ; ಮೃದು ಧೋರಣೆಯತ್ತ ನಾಯಕತ್ವ; ಅನುಭವದ ಕೊರತೆ ಎಂದು ಸ್ಪಷ್ಟೀಕರಣ
0
ಆಗಸ್ಟ್ 11, 2022
Tags