ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಹಿರಿಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ದಿ. ದೇಲಂಪಾಡಿ ಮಹಾಲಿಂಗ ಪಾಟಾಳಿ ಅವರು ಓರ್ವ ನಿμÁ್ಠವಂತ ಕಲಾವಿದರಾಗಿದ್ದು ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ನೆಚ್ಚಿನ ಶಿಷ್ಯರಾಗಿ ರೂಪುಗೊಂಡು ತನ್ನ ಸುಸಂಸ್ಕೃತ ವ್ಯಕಿತ್ವದಿಂದ ಮಾದರಿಯಾಗಿ ಕಲಾ ಸಿದ್ಧಿಯಿಂದ ಪ್ರಸಿದ್ಧರಾಗಿದ್ದರು ಎಂದು ಹಿರಿಯ ವೈದ್ಯ ಸಾಹಿತಿ, ಅರ್ಥಧಾರಿ ಡಾ. ರಮಾನಂದ ಬನಾರಿ ತಿಳಿಸಿದರು.
ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಲೋತ್ಸವದ ಸಭಾ ಕಾರ್ಯಕ್ರಮದಲ್ಲಿ
ಪಾಟಾಳಿಯವರ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು. .
ನಿವೃತ್ತ ಪ್ರಾಧ್ಯಾಪಕ ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ ಅವರ ಗೌರವ ಉಪಸ್ಥಿತಿಯೊಂದಿಗೆ ನಾರಾಯಣ ದೇಲಂಪಾಡಿ ಅವರು ನಿರೂಪಿಸಿದರು. ಯಂ. ರಮಾನಂದ ರೈ ದೇಲಂಪಾಡಿ ವಂದಿಸಿದರು.
ಈ ಸಂದರ್ಭ ವಿಶೇಷವಾಗಿ ಸಂಯೋಜಿಸಲಾಗಿದ್ದ ಭಗವದ್ಗೀತಾ ಪಾರಾಯಣವು ಗೀತಾ ಜ್ಞಾನ ಯಜ್ಞ (ಅಡೂರು) ದೇಲಂಪಾಡಿ ಘಟಕದ ಸದಸ್ಯೆಯರಾದ ಶಾಂತಾಕುಮಾರಿ ದೇಲಂಪಾಡಿ, ರಚನಾ ಜಯಪ್ರಕಾಶ್ ಬಂದ್ಯಡ್ಕ, ಪೂಜಾ ಸಿ. ಎಚ್ ದೇಲಂಪಾಡಿ ಮತ್ತು ಅನಿತಾ ಜಯಾನದ ಕುತ್ತಿಮುಂಡ ಅವರಿಂದ ಭಕ್ತಿಪೂರ್ವಕ ಪ್ರಸ್ತುತಗೊಂಡಿತು.
ಬಳಿಕ
ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಜರಗಿದ ‘ರಾಜಸೂಯ’ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮಡ್ವ ಶಂಕರನಾರಾಯಣ ಭಟ್, ದಯಾನಂದ ಬಂದ್ಯಡ್ಕ, ಚೆಂಡೆಮದ್ದಳೆ ವಾದನದಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಾಳ, ಕಲ್ಲಡ್ಕ ಗುತ್ತು ರಾಮಯ್ಯ ರೈ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಪಾತ್ರಧಾರಿಗಳಾಗಿ ಡಾ. ರಮಾನಂದ ಬನಾರಿ ಮಂಜೇಶ್ವರ, ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಯಂ. ರಮಾನಂದ ರೈ ದೇಲಂಪಾಡಿ, ಸಂಜೀವ ರಾವ್ ಮಯ್ಯಾಳ, ರಾಮ ನಾಯ್ಕ ದೇಲಂಪಾಡಿ, ನಾರಾಯಣ ದೇಲಂಪಾಡಿ ಅವರು ತಮ್ಮ ಅರ್ಥ ವೈಖರಿಯಿಂದ ತಾಳಮದ್ದಳೆಯನ್ನು ಯಶಸ್ವಿಗೊಳಿಸಿದರು. ಲತಾ ಆಚಾರ್ಯ ಬನಾರಿ ಅವರು ಸ್ವಾಗತಿಸಿ ನಂದಕಿಶೋರ ಬನಾರಿ ವಂದಿಸಿದರು.