ಶ್ರೀನಗರ: ನನನ್ನು ಮತ್ತೆ ಗೃಹ ಬಂಧನದಲ್ಲಿಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪ ಮಾಡಿದ್ದು, ಮಾತ್ರವಲ್ಲದೇ ಮನೆ ಗೇಟ್ಗೆ ಬೀಗ ಹಾಕಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಶೋಪಿಯಾನ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸುನಿಲ್ ಕುಮಾರ್ ಭಟ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವುದನ್ನು ತಡೆಯುವುದಕ್ಕಾಗಿ ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಭಾನುವಾರ ಹೇಳಿದ್ದಾರೆ.
ಗುರ್ಪಾಕರ್ ಪ್ರದೇಶದಲ್ಲಿರುವ ತನ್ನ ಮನೆಯ ಗೇಟ್ಗೆ ಬೀಗ ಹಾಕಿರುವುದನ್ನು ಮತ್ತು ಮನೆಯ ಹೊರಗೆ ಸಿಆರ್ಪಿಎಫ್ ವಾಹನ ನಿಲ್ಲಿಸಿರುವ ಫೋಟೊವನ್ನು ಮುಫ್ತಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ನಿಷ್ಠುರ ನೀತಿಗಳಿಂದಾಗಿ ಕಾಶ್ಮೀರ ಪಂಡಿತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ಕಂಬಳಿಯಡಿಯಲ್ಲಿ ಹುದುಗಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ನಿಷ್ಠುರ ನೀತಿಗಳಿಂದಾಗಿಯೇ ಪಲಾಯನ ಮಾಡಲು ಬಯಸದ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿದೆ. ನಾವು ಅವರ ಶತ್ರುಗಳು ಎಂದು ಮುಖ್ಯ ವಾಹಿನಿಗಳಲ್ಲಿ ಬಿಂಬಿಸುವುದಕ್ಕಾಗಿಯೇ ನನ್ನನ್ನು ಇಂದು ಗೃಹ ಬಂಧನದಲ್ಲಿರಿಸಲಾಗಿದೆ. ಚೋಟಿಗಾಮ್ನಲ್ಲಿರುವ ಭಟ್ ಕುಟುಂಬವನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ, ಆದರೆ ಆಡಳಿತ ನನ್ನನ್ನು ತಡೆದಿದೆ. ನಮ್ಮ ಸುರಕ್ಷತೆಗಾಗಿ ನನ್ನನ್ನು ಲಾಕ್ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರು ಮಾತ್ರ ಕಣಿವೆಯ ಮೂಲೆ ಮೂಲೆಗೂ ಭೇಟಿ ನೀಡುತ್ತಿದ್ದಾರೆ ಎಂದು ಮುಫ್ತಿ ಆರೋಪಿಸಿದ್ದಾರೆ ಎಂದು ಮುಫ್ತಿ ಆರೋಪಿಸಿದ್ದಾರೆ.