ಮಂಜೇಶ್ವರ: ಸ್ಪಂಧನ ಟ್ರಸ್ಟ್ ಕೋಳ್ಯೂರು ಇದರ 71 ನೇ ಮಾಸಿಕ ಸೇವಾಯೋಜನೆಯನ್ನು ತೆಂಗಿನ ಮರದಿಂದ ಬಿದ್ದು ಶಯ್ಯಾವಸ್ಥೆಯಲ್ಲಿರುವ ವಿಶ್ವನಾಥ್ ಪೂಜಾರಿ ಅಡೆಕಲಕಟ್ಟೆ ತುಪ್ಪೆ ಇವರಿಗೆ ಹಸ್ತಾಂತರ ಮಾಡಲಾಯಿತು.
ಇವರ 5 ಮಂದಿ ಮಕ್ಕಳು ವಿದ್ಯಾರ್ಥಿಗಳಾಗಿದ್ದಾರೆ.ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ 71 ನೇ ಮಾಸಿಕ ಯೋಜನೆಯ ಚೆಕ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಗುರುಪ್ರಸಾದ್ ಕೋಳ್ಯೂರು, ವಸಂತ ಶೆಟ್ಟಿಗಾರ್ ಬೋರ್ಕಳ, ಸತೀಶ್ ಪರ್ಣಕಜೆ, ವಿಜಯ್ ಕುಲಾಲ್ ಗೋಳಿಪಡ್ಪು, ಬಾಲಕೃಷ್ಣ ಕೋಳ್ಯೂರು, ಸುಧೀರ್ ರಂಜನ್ ದೈಗೋಳಿ, ಪ್ರವೀಣ್ ಕಳಿಯೂರ್ ಉಪಸ್ಥಿತರಿದ್ದರು.
ಕೋಳ್ಯೂರು ಸ್ಪಂಧನ ಟ್ರಸ್ಟ್ ಮಾಸಿಕ ಸೇವಾ ಯೋಜನೆ ನೆರವು ಹಸ್ತಾಂತರ
0
ಆಗಸ್ಟ್ 04, 2022