ಕೊಚ್ಚಿ: ಜಾನಕಿ ಸುಧೀರ್ ಅವರ ಹೊಸ ಫೆÇೀಟೋ ಶೂಟ್ ಚಿತ್ರಗಳು ಚರ್ಚೆಯಾಗುತ್ತಿವೆ. ಕೈ ಮತ್ತು ಕಿವಿಯಲ್ಲಿ ತುಂಬಾ-ತುಂಬ ಆಭರಣ, ಕೆಂಪು ಉಂಗುರ, ತಲೆಯ ಮೇಲೆ ಮಲ್ಲಿಗೆ ದಳಗಳ ಸುಂದರ ಮಾಲೆ ಹಾಕಿಕೊಂಡ ಜಾನಕಿ ಫೆÇೀಟೋ ಪ್ರೇಕ್ಷಕರ ಮುಂದೆ ಚರ್ಚೆಗೆ ಗ್ರಾಸವಾಗಿದೆ.
ಮುಂಡನ್ನು ಮಾತ್ರ ಧರಿಸಿರುವ ಜಾನಕಿಯು ತನ್ನ ಎದೆಯನ್ನು ಆಭರಣಗಳಿಂದ ಮುಚ್ಚಿದ್ದಾಳೆ.
ಓಣಂ ಪ್ರಯುಕ್ತ ನಡೆದ ಫೆÇೀಟೋ ಶೂಟ್‍ನಲ್ಲಿ ರೌನಾಥ್ ಶಂಕರ್ ಚಿತ್ರಗಳನ್ನು ತೆಗೆದಿದ್ದಾರೆ. ಜಾನಕಿ ಈಗಾಗಲೇ ಇಂತಹ ಬೋಲ್ಡ್ ಫೆÇೀಟೋಶೂಟ್‍ಗಳ ಚಿತ್ರಗಳನ್ನು ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ನಟಿ ತನಗೆ ಕಷ್ಟವಾಗದ ರೀತಿಯಲ್ಲಿ ದೇಹಕ್ಕೆ ಹೊಂದುವ ಬಟ್ಟೆ ಧರಿಸಿ ಫೆÇೀಟೋಶೂಟ್ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದರು.
ಲೆಸ್ಬಿಯನ್ ಲವ್ ಆಧಾರಿತ ಹೋಲಿ ವೂಂಡ್ ಚಿತ್ರದಲ್ಲಿ ಜಾನಕಿ ಸುಧೀರ್ ಮುಖ್ಯ ಪಾತ್ರಧಾರಿ. ಅಮೃತಾ ವಿನೋದ್ ಮತ್ತು ಸಾಬು ಪ್ರೌದೀನ್ ಕೂಡ ಚಿತ್ರದ ಪ್ರಮುಖ ಪಾತ್ರಧಾರಿಗಳು. ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಮತ್ತು ಹಲವು ವರ್ಷಗಳ ನಂತರ ಮತ್ತೆ ಭೇಟಿಯಾಗುವ ಇಬ್ಬರು ಹುಡುಗಿಯರ ಭಾವನಾತ್ಮಕ ಕ್ಷಣಗಳ ಮೂಲಕ ಸಾಗುವ ಚಿತ್ರ ಹೋಲಿ ವೂಂಡ್. ಪೌಲ್ ವಿಕ್ಲಿಫ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಉಣ್ಣಿ ಮಡವೂರು ಕ್ಯಾಮರಾ ನಿರ್ವಹಿಸಿದ್ದಾರೆ. ಮರಕ್ಕಾರ್, ಅರಬಿಕಡಲಿನಕ್ಕರೆ, ಸಿಂಹಂ ಚಿತ್ರಕ್ಕೆ ಸಂಗೀತ ನೀಡಿರುವ ರೋನಿ ರಾಫೆಲ್ ಈ ಚಿತ್ರದ ಸಂಗೀತವನ್ನೂ ಸಂಯೋಜಿಸಿದ್ದಾರೆ.
ಕೈ-ಕಿವಿಯಲ್ಲಿ ಒಡವೆ ತುಂಬಿಕೊಂಡ ಜಾನಕಿ ಸುಧೀರ್, ಅರೆಬೆತ್ತಲೆ ಚಿತ್ರ ವೈರಲ್: ಪೋಟೊ ಶೂಟ್ ಬಗ್ಗೆ ಭಾರೀ ಚರ್ಚೆ
0
ಆಗಸ್ಟ್ 13, 2022
Tags