ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಕಾಲದ ಮರಣೋತ್ತರ ಪರೀಕ್ಷಾ ಸೌಲಭ್ಯ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ತರಲಾದ ಮೃತದೇಹ ರಾತ್ರಿ ವೇಳೆ ಮಹಜರು ನಡೆಸಲಾಗದೆ ಮೃತದೇಹದ ವಾರಸುದಾರರಿಗೆ ಬುಧವಾರದ ವರೆಗೆ ಕಾಯಬೇಕಾಗಿ ಬಂದಿದೆ. ರಾತ್ರಿ ವೇಳೆ ಶವಮಹಜರು ನಡೆಸಲು ಅಗತ್ಯ ಸೌಕರ್ಯ ಒದಗಿಸುವಂತೆ ಹೈಕೋರ್ಟು ನೀಡಿರುವ ತೀರ್ಪಿನ ನಡುವೆಯೂ ಸರ್ಕಾರ ಸವಲತ್ತು ಒದಗಿಸಲು ಮುಂದಾಗದಿರುವುದರಿಂದ ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಟನೆ(ಕೆಜಿಎಂಒಎ)ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವುದನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಮರಣೋತ್ತರ ಪರೀಕ್ಷೆ ನಡೆಸಲು ಅಗತ್ಯವಿರುವ ಫಾರೆನ್ಸಿಕ್ ಸರ್ಜನ್ ನೇಮಕಾತಿ ನಡೆಸುವಂತೆ ಕೆಜಿಎಂಒಎ ಈ ಹಿಂದೆ ಬೇಡಿಕೆ ಮುಂದಿರಿಸಿದ್ದರೂ, ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ತಮ್ಮ ಈ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ವರೆಗೆ ರಾತ್ರಿ ಕಾಲ ಮರಣೋತ್ತವ ಸೇವೆ ಬಹಿಷ್ಕರಿಸುವುದಾಗಿ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಒಬ್ಬ ಫಾರೆನ್ಸಿಕ್ ಸರ್ಜನ್ ಮಾತ್ರ ಕರ್ತವ್ಯದಲ್ಲಿದ್ದು, ಇವರಿಗೆ ರಜೆ, ನ್ಯಾಯಾಲಯ ಕರ್ತವ್ಯ ಸೇರಿದಂತೆ ಇತರ ಕೆಲಸಗಳ ಸಂದರ್ಭ ಶವಮಹಜರು ನಡೆಸುವುದು ಕಷ್ಟಸಾಧ್ಯವಾಗುತ್ತಿರುವುದನ್ನು ಮನಗಂಡು ಹೆಚ್ಚುವರಿ ಫಾರೆನ್ಸಿಕ್ ಸರ್ಜನ್ ಹಾಗೂ ಮೂವರು ನರ್ಸಿಂಗ್ ಅಸಿಸ್ಟೆಂಟ್‍ಗಳ ಸೇವೆ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಹೈಕೋರ್ಟಿಗೆ ಅರ್ಜಿ:
ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ಕಾಳ ಶವಮಹಜರು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಶಾಸಕ ಎನ್.ಎ ನೆಲ್ಲಿಕುನ್ನು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಆ. 19ರಂದು ವಿಚಾರಣೆಗೆ ಬರಲಿದೆ. ಮಂಗಳವಾರ ಸಂಜೆ ಮರಣೋತ್ತರ ಪರೀಕ್ಷೆಗಾಗಿ ಆಗಮಿಸಿದ ಶವದ ಮಹಜರು ನಡೆಸದ ಕ್ರಮ ಖಂಡಿಸಿ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸ್ಥಗಿತಗೊಂಡ ರಾತ್ರಿ ಕಾಲ ಶವಮಹಜರು: ನ್ಯಾಯಾಲಯ ಮೆಟ್ಟಿಲೇರಿದ ಶಾಸಕ
0
ಆಗಸ್ಟ್ 18, 2022