HEALTH TIPS

ಮಧುಮೇಹಿಗಳು ಬಾಳೆ ಹೂವು ತಿಂದರೆ ಏನಾಗುತ್ತದೆ?


             ಬಾಳೆಹಣ್ಣು ಜನಸಾಮಾನ್ಯರಿಗೆ ಅತ್ಯಂತ ಪ್ರಿಯವಾದದ್ದು. ಬಾಳೆಹಣ್ಣಾಗಲೀ, ಚಿಕ್ಕ ಗೊನೆಯಾಗಲಿ ಇಲ್ಲದ ಮನೆಗಳು ಕರಾವಳಿ ಭಾಗದಲ್ಲಿ ಇರದೆನ್ನಬಹುದು
           ಇನ್ನೊಂದು ವಿಶೇಷವೆಂದರೆ ಹೆಚ್ಚಿನವರ ಹಿತ್ತಲಲ್ಲೂ ಒಂದಾದರೂ ಬಾಳೆಗಿಡ ಇದ್ದೇ ಇರುತ್ತದೆ. ಹಾಗಾಗಿ ಬಾಳೆ ನಮಗೆಲ್ಲ  ಚಿರಪರಿಚಿತ.
            ಬಾಳೆಯ ಮಹತ್ತರ ವಿಶೇಷವೆಂದರೆ ಅದರ ಪ್ರತಿಯೊಂದು ಭಾಗವೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಿ. ಎಲೆಯಿಂದ ತೊಡಗಿ ದಿಂಡಿನವರೆಗೂ ನಾವು ಬಳಸುತ್ತೇವೆ, ವೈವಿಧ್ಯತೆಯಿಂದ. ಬಾಳೆಲೆ ಬಳಸಿ ಆಹಾರ ಸೇವನೆ, ಆಹಾರ ಪೊಟ್ಟಣ, ದಿಂಡಿನ ಚಟ್ನಿ, ಸಾಂಬಾರು, ಪಲ್ಯ ಸಹಿತ ಹಲವು ವಿಧದ ಖಾದ್ಯಗಳನ್ನು ತಯಾರಿಸಬಲ್ಲೆವು.  
         ಬಾಳೆಹಣ್ಣು ತಿನ್ನುವುದು ತುಂಬಾ ಒಳ್ಳೆಯದು ಎಂದು ಬಹಳಷ್ಟು ಜನರು ನಂಬಿದ್ದಾರೆ. ಆದರೆ ಅದರ ಪ್ರಯೋಜನಗಳೇನು ಎಂಬುದು ಅನೇಕರಿಗೆ ತಿಳಿದಿಲ್ಲ. ಬಾಳೆ ಹೂ(ಪೂಂಬೆ) ಎಸೆಯುವ ಬದಲು ಉಪ್ಪಿನ ಕಾಯಿ ಅಥವಾ ಇನ್ನಾವುದಾದರೂ ಜೊತೆಯಲ್ಲಿ ತಿಂದರೆ ಏನೆಲ್ಲಾ ಆರೋಗ್ಯಕಾರಿ ಲಾಭಗಳಿವೆ ಎಂಬುದನ್ನು ನೋಡೋಣ.
         ಬಾಳೆ ಬಲಿತ ಬಳಿಕ ಹೂ ಗೊಂಚಲುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬಾಳೆ ಗೊಂಚಲಿನ ಅಂಶಗಳು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದು ಅದರ ಉತ್ಕರ್ಷಣ ನಿರೋಧಕಗಳಿಂದಾಗಿ. ಇದರಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ಬಾಳೆ ಹೂವಿನ  ಎಲೆಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಬಾಳೆ ಮೊಗ್ಗುಗಳು ಆಸ್ಟಿಯೊಪೆÇರೋಸಿಸ್‍ಗೆ ಚಿಕಿತ್ಸೆ ನೀಡಬಲ್ಲವು ಏಕೆಂದರೆ ಅವುಗಳು ಬಹಳಷ್ಟು ಸತುವನ್ನು ಹೊಂದಿರುತ್ತವೆ. ಹಾಗಾಗಿ ಬಾಳೆ ಗೊಂಚಲು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
          ಗರ್ಭಿಣಿಯರು ಮತ್ತು ಹೆರಿಗೆಯಾದ ತಾಯಂದಿರು ಬಾಳೆ ಹೂವಿನ ಗೊಂಚಲು ತಿನ್ನಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಎದೆ ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆ ಗೊಂಚಲಿನಲ್ಲಿರುವ ಅಂಶಗಳು ಗರ್ಭಾಶಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಬಾಳೆ ಹೂವನ್ನು ಸೇರಿಸಿದರೆ ಅವರ ಆರೋಗ್ಯವನ್ನು ಕಳೆದುಕೊಳ್ಳದೆ ತೂಕವನ್ನು ಕಳೆದುಕೊಳ್ಳಬಹುದು.  ಇದರ ಜೊತೆಗೆ ಬಾಳೆ ಹೂವಿನ ಇನ್ನಷ್ಟು ಉಪಯೋಗ, ಪರಿಣಾಮಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳೂ ಅಗತ್ಯವಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries