ಕಾಸರಗೋಡು: ಆಧ್ಯಾತ್ಮಿಕ ಆಚಾರ್ಯ, ಚಿನ್ಮಯ ಮಿಷನ್ ಸಂಸ್ಥಾಪಕ ಸ್ವಾಮಿ ಚಿನ್ಮಯಾನಂದ ಅವರ 29ನೇ ಸಮಾಧಿ ದಿನವನ್ನು ಆರಾಧನಾ ದಿನವನ್ನು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಚರಿಸಲಾಯಿತು. ಚಿನ್ಮಯ ಮಿಶನ್ ಮುಖ್ಯಸ್ಥ, ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕೇವಲ ಜ್ಞಾನವನ್ನು ತುಂಬಲಿರುವ ಪಾತ್ರೆಗಳಲ್ಲ ಬದಲಾಗಿ ಪ್ರಕಾಶವನ್ನು ಬೀರುವ ದೀಪಗಳಾಗವೇಕು ಎಂದು ತಿಳಿಸಿದರು.
ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿಜು ಮಡತ್ತಿಲ್ ಉಪಸ್ಥಿತರಿದ್ದರು. ಈ ಸಂದರ್ಭ ಸ್ವಾಮಿ ವಿವಿಕ್ತಾನಂದ ಸರಸ್ವತಿ ಗುರುಪಾದುಕಾ ಪೂಜೆ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಗುರುಸ್ತೋತ್ರ, ಭಜನೆ, ಸಮಷ್ಟಿ ಪೂಜೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗೆಳನ್ನು ಏರ್ಪಡಿಸಲಾಯಿತು.
ಚಿನ್ಮಯ ವಿದ್ಯಾಲಯದಲ್ಲಿ ಸ್ವಾಮಿ ಚಿನ್ಮಯಾನಂದರ ಸಮಾಧಿ ದಿನಾಚರಣೆ
0
ಆಗಸ್ಟ್ 04, 2022
Tags