ಕಾಸರಗೋಡು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಿಭಾಗಕ್ಕೆ ಸೇರಿದ ಯುವತಿ ಹಾಗೂ ಯುವಕರಿಗೆ ಕಮ್ಯುನಿಟಿ ಸೋಷಿಯಲ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯು ತಾತ್ಕಾಲಿಕವಾಗಿದ್ದು, ಸೋಶಿಯಲ್‍ವರ್ಕ್‍ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಭ್ಯರ್ಥಿಗಳ ಪ್ರಾಯ ಮಿತಿ 21ರಿಂದ 35 ವರ್ಷವಾಗಿದ್ದು, ಅರ್ಜಿಯ ಜತೆಗೆ ಜಾತಿ, ವಿದ್ಯಾಭ್ಯಾಸ ಯೋಗ್ಯತೆ, ಪ್ರಾಯ, ಎಂಬಿವುಗಳನ್ನು ಧೃಡಪಡಿಸುವ ಪ್ರಮಾಣ ಪತ್ರಗಳ ನಕಲಿ ಎಂಬಿವುಗಳ ಸಹಿತ ಆಗಸ್ಟ್ 5ರ ಮೊದಲು ಕಾಸರಗೋಡು ಸಿವಿಲ್ ಸ್ಟೇಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಮ್ಯುನಿಟಿ ಸೋಶಿಯಲ್ ವರ್ಕರ್: ಅರ್ಜಿ ಆಹ್ವಾನ
0
ಆಗಸ್ಟ್ 02, 2022
Tags