ಕಾಸರಗೋಡು: ನಗರದ ಕೊರಕ್ಕೋಡು ಆರ್ಯಕಾತ್ರ್ಯಾಯಿನಿ ಬಾಲಗೋಕುಲ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರೀ ಆರ್ಯಕಾತ್ರ್ಯಾಯಿನಿ ದೇವಸ್ಥಾನದ ಮೊಕ್ತೇಸರ ಪುರುಷೋತ್ತಮ ರಆವ್ ಧರೇಕರ್ ಧ್ವಜಾರೋಹಣ ನಡೆಸಿದರು. ಈ ಸಂದರ್ಭ ಬಾಲಗೋಕುಲದ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.
ಪುತ್ತಿಗೆ ಸೀತಾಂಗೋಳಿ ಮುಕಾರಿಕಂಡ ಅಂಗನವಾಡಿಯಲ್ಲಿ ನಡೆದ ಸಮಾರಂಭದಲ್ಲಿ ಪುತ್ತಿಗೆ ಗ್ರಾಮ ಪಮಚಾಯಿತಿ ಸದಸ್ಯೆ ಕಾವ್ಯಶ್ರೀ ಧ್ವಜಾರೋಹಣ ನಡೆಸಿದರು.ರಮೇಶ್ ಕೋಡಿಮೂಲೆ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ(ರಿ)ವತಿಯಿಂದ ನಡೆದ ಸಮಾರಂಭದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೋಹನ್ ರಾವ್ ಧ್ವಜಾರೋಹಣ ನಡೆಸಿದರು. ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂಧರ್ಭ ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಿರಂಗ ಯೋಗ ಪ್ರದರ್ಶನ ನಡೆಯಿತು.
ಜಿಲ್ಲೆಯ ವಿವಿಧೆಡೆ ಸ್ವಾತಂತ್ರ್ಯೋತ್ಸವ
0
ಆಗಸ್ಟ್ 17, 2022