ಬದಿಯಡ್ಕ: ಚಿನ್ಮಯ ವಿದ್ಯಾಲಯ ಬದಿಯಡ್ಕದಲ್ಲಿ 2022_2023 ಸಾಲಿನ ಶೈಕ್ಷಣಿಕ ವರ್ಷದ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜರಗಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಮಾನಸ ಅವರು ಪ್ರತಿಜ್ಞಾ ಬೋಧನೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ವಿವಿಧ ಸಂಘಗಳ ವಿದ್ಯಾರ್ಥಿಗಳಿಂದ ಮನರಂಜಾನ ಕಾರ್ಯಕ್ರಮ ಮತ್ತು ರಸಪ್ರಶ್ನೆ ಜರಗಿತು. ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಇದೇ ಸಂದರ್ಭ ಬುಧವಾರ ಚಿನ್ಮಯ ಆರಾಧನಾ ದಿನವನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಮಾನಸ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿಶೇಷ ಸತ್ಸಂಗ ನಡೆಸಲಾಯಿತು. ವಿದ್ಯಾರ್ಥಿನಿ ಶ್ರೇಯ ಕಾರ್ಯಕ್ರಮ ನಿರೂಪಿಸಿದಳು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.