ಆಲಪ್ಪುಳ: ಕಲೆಕ್ಟರ್ ವಿಆರ್ ಕೃಷ್ಣ ತೇಜ ಅವರು ಆಲಪ್ಪುಳ ನಿವಾಸಿಗಳಿಗೆ ಚಿರಪರಿಚಿತರು. ಆಲಪ್ಪುಳದ ಜನರು ಪ್ರವಾಹದ ಸಮಯದಲ್ಲಿ ಕಾಳಜಿಯಿಂದ ತಮ್ಮ ಬೆಂಬಲಕ್ಕೆ ನಿಂತ ಆಗಿನ ಸಬ್ ಕಲೆಕ್ಟರ್, ಈಗಿನ ಕಲೆಕ್ಟರ್ ನ್ನು ಎಂದಿಗೂ ಮರೆಯುವವರಲ್ಲ.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ವಿ.ಆರ್.ಕೃಷ್ಣ ತೇಜ ಜನಮಾನಸದಲ್ಲಿ, ಮಕ್ಕಳ ಮನದಲ್ಲೂ ಪ್ರೀತಿ, ಕಾಳಜಿಗೆ ಕೊರತೆಯಿಲ್ಲದೆ ಸ್ಥಾನ ಪಡೆಯುತ್ತಿದ್ದಾರೆ.
ಮಳೆಯಿಂದ ರಜೆ ಘೋಷಿಸಲ್ಪಟ್ಟು ಆರಾಮವಾಗಿರುವ ಮಕ್ಕಳಿಗೆ ಜಿಲ್ಲಾಧಿಕಾರಿಗಳ ಫೇಸ್‍ಬುಕ್ ಪುಟಕ್ಕೆ ಭೇಟಿ ನೀಡಿ ಅವರ ಸಂದೇಶಗಳಿಗಾಗಿ ಎಡತಾಕುತ್ತಾರೆ. ರಜೆ ಘೋಷಣೆ ಜತೆಗೆ ಸೂಚನೆ, ಎಚ್ಚರಿಕೆ ನೀಡುವ ಕಲೆಕ್ಟರ್ ಮಕ್ಕಳ ಪಾಲಿಗೆ ಅಂಕಲ್ ಆಗಿದ್ದಾರೆ.
ಆತ್ಮೀಯ ಮಕ್ಕಳೇ,
ನಾಳೆಯೂ ರಜೆ ಎಂದು ಕೇಳಿದ್ದೀರಾ? ನಿನ್ನೆ ಹೇಳಿದ್ದನ್ನು ಮರೆಯಬೇಡಿರಿ, ಮಳೆಗಾಲವಾದ್ದರಿಂದ ಪಾಲಕರು ಕೆಲಸಕ್ಕೆ ತೆರೆಳಿದ ವೇಳೆ ಬ್ಯಾಗ್ ನಲ್ಲಿ ಕೊಡೆ, ರೈನ್ ಕೋಟ್ ಇರುವಂತೆ ನೋಡಿಕೊಳ್ಳಬೇಕಾದುದು ಮಕ್ಕಳಾದ ನಿಮ್ಮ ಹೊಣೆ. . ಹೊರಡುವ ಮುನ್ನ ಅವರನ್ನು ಹಿಡಿದು ಮುದ್ದಾಡಬೇಕು.ಇಲ್ಲಿಯೇ ಕಾದು ಹುμÁರಾಗಿ ವಾಹನ ಚಲಾಯಿಸಿ ಸಂಜೆ ಬೇಗ ಬರಬೇಕು. ಒಳ್ಳೆಯ ಅಭ್ಯಾಸಗಳನ್ನು ಅನುಸರಿಸಬೇಕು. ಬುದ್ಧಿವಂತರಾಗಿರಿ.
ತುಂಬಾ ಪ್ರೀತಿಯಿಂದ, ನಿಮ್ಮ ಪ್ರಿಯ
ಕಲೆಕ್ಟರ್ ಮಾಮನ್
ನಿನ್ನೆ ಈ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ. ಮೊನ್ನೆಯೂ ರಜೆ ಘೋಷಿಸಿದ ಜಿಲ್ಲಾಧಿಕಾರಿ ಪೋಸ್ಟ್ ಕೂಡ ವೈರಲ್ ಆಗಿತ್ತು.
ನಿಮಗೆ ರಜೆ ಕೊತ್ತಿರುವೆ….... ಆದರೆ ನೀರಿಗೆ ಜಿಗಿಯಬಾರದು. ತಡವರಿಸದೇ ಪಠ್ಯ ಪುಸ್ತಕಗಳ ಪುಟವನ್ನು ಮನೆಯಲ್ಲೇ ಕುಳಿತು ಮನನಮಾಡಿ ಎಂದು ಮಾರ್ಮಿಕವಾಗಿ ಆಲಪ್ಪುಳ ಕಲೆಕ್ಟರ್ ಬರೆದಿದ್ದರು.
ನಿನ್ನೆ ಹೇಳಿದ್ದನ್ನು ಮರೆಯಬೇಡಿರಿ…. ತಂದೆ-ತಾಯಿ ಕೆಲಸಕ್ಕೆ ತೆರಳುವಾಗ ಅವರನ್ನು ಹಿಡಿದು ಅಪ್ಪುಗೆ ಕೊಡಬೇಕು; ಸಂಜೆ ಅವರ ಬರುವಿಕೆಗಾಗಿ ಕಾಯುತ್ತಿರಿ: ನಿಮ್ಮವನೇ ಆದ ಕಲೆಕ್ಟರ್ ಮಾಮನ್; ಆಲಪ್ಪುಳ ಜಿಲ್ಲಾಧಿಕಾರಿಯ ಇನ್ನೊಂದು ಪೋಸ್ಟ್ ವೈರಲ್
0
ಆಗಸ್ಟ್ 04, 2022
Tags