HEALTH TIPS

ಇದು ಮಾತ್ರೆಯಲ್ಲ, ಫಾರ್ಮಾಸಿಸ್ಟ್- ನರ್ಸ್​ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ!: ವೈರಲ್:

 

            ಚೆನ್ನೈ: ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್​ ಜೋಡಿಯೊಂದು ಮಾತ್ರೆ ರ್ಯಾಪರ್ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ವೆಡ್ಡಿಂಗ್ ಕಾರ್ಡ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

                 ಮದುವೆ ಎಂಬುದು ಬದುಕಿನ ಮಹತ್ತರ ಘಟ್ಟ. ನೂರಾರು ಕನಸಿನೊಂದಿಗೆ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದುವೆ ಹೀಗೇ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ… ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯದ್ದು ಪ್ರಮುಖ ಸ್ಥಾನ.

Unique wedding invitation on a tablet strip amuses netizens

 

              ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್​ ಜೋಡಿಯೊಂದು ಇದೀಗ ಇದೇ ಮದುವೆ ಆಮಂತ್ರಣ ಪತ್ರಿಕೆ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ಹಿಂದೆ ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆಧಾರ್​ ಕಾರ್ಡ್​, ದಿನಪತ್ರಿಕೆ, ಟಿವಿ ಜಾಹೀರಾತು, ಪರಿಸರ ಕಾಳಜಿ, ಮೊಬೈಲ್​ ಅಪ್ಲಿಕೇಷನ್​ ಮಾದರಿ, ಲ್ಯಾಪ್​ಟಾಪ್​ ಮದರಿಯ ಕಾರ್ಡ್​… ಹೀಗೆ ತರೇಹವಾರಿ ರೀತಿಯ ಆಮಂತ್ರಣ ಪತ್ರಿಕೆಗಳು ಸುದ್ದಿಯಾಗಿದ್ದವು. ಈ ಪಟ್ಟಿಗೆ ಇದೀಗ ಟ್ಯಾಬ್ಲೆಟ್ ರ್ಯಾಪರ್ ಮಾದರಿಯ ಮದುವೆ ಆಮಂತ್ರಣ ಪತ್ರಿಕೆ ಸೇರ್ಪಡೆಯಾಗಿದೆ.

        

ತಮಿಳನಾಡಿನಲ್ಲಿ ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್​ ಆಗಿದ್ದು, ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ. ಆ ಮೂಲಕ ವೃತ್ತಿಪರತೆ ತೋರಿದ್ದಾರೆ. 

              ವರನ ಹೆಸರು ಎಳಿಲರಸನ್. ವಧುವಿನ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಳಿಲರಸನ್​ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್​​ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಮುದ್ರಿಸಲಾಗಿದೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.

        ಟ್ಯಾಬ್ಲೆಟ್ ಕಾರ್ಡ್‌​ಗಳಲ್ಲಿ ಸೂಚಿಸುವ ವಾರ್ನಿಂಗ್​ ಸ್ಥಳದಲ್ಲಿ 'ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್​ ಮಾಡದೆ ಬನ್ನಿ' ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದು, ಅಂದು ಶಿಕ್ಷಕರ ದಿನ ಮತ್ತು ಮದರ್​ ತೆರೇಸಾ ಸ್ಮರಣೆ ದಿನವಿದೆ.  ಮಾತ್ರೆ ಶೀಟ್​ ಮಾದರಿಯ ಈ ಮದ್ವೆ ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಗೆ ಶುಭ ಕೋರುತ್ತಿದ್ದಾರೆ.

Innovative invitation in the form of Tablet strip by pharmacology asst professor weeding #SaturdayMorning #SaturdayMotivation #pharmacology
Image
3
Reply
Copy link

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries