ಬದಿಯಡ್ಕ: ಜಿ.ಎಸ್.ಬಿ. ಸಮಾಜದ ನೇತೃತ್ವದಲ್ಲಿ ಬದಿಯಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀವರಮಹಾಲಕ್ಷ್ಮಿ ವೃತ ನಡೆಯಿತು. ಕುಂಬಳೆ ದಿನೇಶ. ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಜಿ. ಎಸ್.ಬಿ ಸಮಾಜ ಬದಿಯಡ್ಕ ಇದರ ಅಧ್ಯಕ್ಷ ಗೋಕುಲದಾಸ್ ಪೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರಿನ ಸುಚಿತ್ರಸಜ್ಜನ್ ಶೆಣೈ ಉಪಸ್ಥಿತರಿದ್ದು, ಎಸ್ ಎಲ್ ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ಸ್ವಪ್ನಾ ನಾಯಕ್ ಸ್ವಾಗತಿಸಿ ವಿನುತ ಪ್ರಭು ವಂದಿಸಿದರು.
ಬದಿಯಡ್ಕ ಜಿ.ಎಸ್.ಬಿ ಸಮಾಜದ ವತಿಯಿಂದ ವರಮಹಾಲಕ್ಷ್ಮೀ ಪೂಜೆ ಸಂಪನ್ನ
0
ಆಗಸ್ಟ್ 16, 2022
Tags