ಮಧೂರು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಮೀಪುಗುರಿ ಕಾಸರಗೋಡು ಇದರ ಆಶ್ರಯದಲ್ಲಿ ಪ್ರತಿವರ್ಷ ಏರ್ಪಡಿಸುವ ಕಾಸರಗೋಡು ಜಿಲ್ಲಾ ಇತಿಹಾಸ ಪರಂಪರೆ ಉಳಿಸಿ ದಿನಾಚರಣೆ ಭಾನುವಾರ ಜರಗಿತು. ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಘಟಕ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಶ್ರೀರಾಮನಾಥ ಸಾಸ್ಕøತಿಕ ಭವನ ಸಮಿತಿ, ರಾಮನಾಥ ನಗರ ಕೋಟೆಕಣಿ ಹಾಗೂ ಕೆ.ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ ಕನ್ನಡ ಗ್ರಾಮ ಸಂಘಟನೆಗಳು ಸಹಕಾರ ನೀಡಿದ್ದವು.
ನಗರಸಭೆ ಕೌನ್ಸಿಲರ್ ಶಾರದಾ ಬಿ. ಉದ್ಘಾಟಿಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರೊ.ಎ.ಶ್ರೀನಾಥ್ ಕಾಸರಗೋಡು, ವಿಷ್ಣು ಶಾನುಭೋಗ್ ಕೂಡ್ಲು, ಕೆ.ನಿರಂಜನ ಕೊರಕ್ಕೋಡು, ವೆಂಕಟ್ ಭಟ್ ಎಡನೀರು, ವಿ.ಬಿ.ಕುಳಮರ್ವ, ಬಿ.ಸುರೇಶ್ ಕೂಡ್ಲು, ಪಿ.ದಿವಾಕರ ಅಶೋಕನಗರ, ಕುಶಾಲಕುಮಾರ ಕೆ., ಹರೀಶ ಪಾರೆಕಟ್ಟೆ, ಪ್ರಜ್ಞೇಶ್ ಕಾಸರಗೋಡು, ಕಾವ್ಯಕುಶಲ, ರಾಧಾ, ಸವಿತಾ, ಕಿಶೋರ್ ಕುಮಾರ್ ಭಾಗವಹಿಸಿ ಐತಿಹಾಸಿಕ ಪರಂಪರೆ ಉಳಿಸುವ ಪ್ರತಿಜ್ಞೆ ಸ್ವೀಕರಿಸಿದರು. ದಿವಾಕರ ಅಶೋಕನಗರ ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭ ಜಿಲ್ಲಾ 6ನೇ ಚುಟುಕು ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತÀರಾಗಿರುವ ವೆಂಕಟ್ ಭಟ್ ಎಡನೀರು ಅವರನ್ನು ಗೌರವಿಸಲಾಯಿತು. ಎಸ್.ಎಲ್.ಭಾರದ್ವಾಜ್ ಬೇಕಲ್ ಅಭಿನಂದಿಸಿ ಮಾತನಾಡಿದರು. ರಾಮನಾಥ ಭವನ ಸಮಿತಿಯ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಮಾಧ್ಯಮ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡು ವಂದಿಸಿದರು.
ಮೀಪುಗುರಿಯಲ್ಲಿ ಇತಿಹಾಸ ಪರಂಪರೆ ಉಳಿಸಿ ದಿನಾಚರಣೆ
0
ಆಗಸ್ಟ್ 02, 2022