HEALTH TIPS

ಬೆಂಗಾವಲು ವಾಹನ ನಿಲ್ಲಿಸಿ ಮಹಿಳೆ, ಮಗುವಿಗೆ ನೆರವಾದ ಆಂಧ್ರ ಸಿಎಂ ಜಗನ್

 

       ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್ ಮೋಹನ್ ರೆಡ್ಡಿ ಅವರು ಮಹಿಳೆ ಮತ್ತು ಆಕೆಯ ಅನಾರೋಗ್ಯ ಪೀಡಿತ ಮಗನನ್ನು ಭೇಟಿಯಾಗಿ ಮಾನವೀಯತೆ ಮೆರೆದಿದ್ದಾರೆ.

                 ಜಗನ್ ಅವರು ಕಾಕಿನಾಡ ಜಿಲ್ಲೆಯ ತುನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನಸಂದಣಿಯ ನಡುವೆ ಅನಾರೋಗ್ಯ ಪೀಡಿತ ಮಗನನ್ನು ಕೈಯಲ್ಲಿ ಎತ್ತಿಕೊಂಡು ಮಹಿಳೆಯೊಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.


                  ಈ ಸಂದರ್ಭದಲ್ಲಿ ಮಹಿಳೆಯನ್ನು ಕಂಡ ಜಗನ್, ಕೂಡಲೇ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿದ್ದು, ಮಹಿಳೆಯನ್ನು ಕರೆದು ಸಮಸ್ಯೆಯನ್ನು ಅಲಿಸಿದ್ದಾರೆ. 

               ಪ್ರತಿಪಾಡು ಕ್ಷೇತ್ರದ ಶಂಖವರಂ ಮಂಡಲದ ಮಂಡಪಂ ಗ್ರಾಮದ ತನುಜಾ ಎಂಬುವರು ತಮ್ಮ ಮಗನ ಆರೋಗ್ಯ ಸಮಸ್ಯೆ ಕುರಿತು ಜಗನ್ ಬಳಿ ವಿವರಿಸಿದ್ದು, ಸಹಾಯ ಮಾಡುವಂತೆ ಕೋರಿದ್ದಾರೆ.

                            ಸಮಸ್ಯೆಗೆ ಸ್ಪಂದಿಸಿದ ಜಗನ್, ಮಹಿಳೆ ಹಾಗೂ ಆಕೆಯ ಮಗನಿಗೆ ಕೂಡಲೇ ನೆರವು ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

                         ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಗನ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

AP CM Jagan Mohan Reddy stopped his convoy to help out a mother with a child who was unwell. In Kakinada. #Kakinada #AndhraPradesh

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries