ಕಾಸರಗೋಡು: ಜಿಲ್ಲೆಯ ವಿವಿಧೆಡೆ ರೈಲ್ವೆ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಉತ್ತರ ವಲಯ ಡಿವೈಎಸ್‍ಪಿ ಕೆ.ಎನ್ ರಾಧಾಕೃಷ್ಣನ್ ನೇತೃತ್ವದ ಅಧಿಕಾರಿಗಳ ತಂಡ ಸಮಗ್ರ ತನಿಖೆ ಆರಂಭಿಸಿದೆ. ರೈಲ್ವೆ ಇನ್ಸ್‍ಪೆಕ್ಟರ್ ಆಲಿ ಅಕಬ್ರ್, ವಿಭಾಗೀಯ ಸುರಕ್ಷಾ ಆಐಉಕ್ತ ಜಿತಿನ್ ಬಿ.ರಾಜ್ ಜತೆಗಿದ್ದಾರೆ.
ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿರುವ ಕಾಸರಗೋಡು ತಳಂಗರೆ, ತೃಕ್ಕನ್ನಾಡ್ ರೈಲ್ವೆ ಹಳಿ ಸಂದರ್ಶಿಸಿದ ತಂಡ ಇತರ ಪ್ರದೇಶಗಳಿಗೂ ಡಿವೈಎಸ್‍ಪಿ ನೇತೃತ್ವದ ತಂಡ ಭೇಟಿ ನೀಡಿ ಮಾಃಇತಿ ಸಂಗ್ರಹಿಸಲಿದೆ. ಕಳೆದ ಎರಡು ವರ್ಷಗಳಿಂದ ರೈಲುಗಳಿಗೆ ಕಲ್ಲು ತೂರಾಟ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿರುವ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ರೈಲುಗಳಿಗೆ ಕಲ್ಲು ತೂರಾಟ, ರೈಲ್ವೆ ಹಳಿಯಲ್ಲಿ ಕರ್ಗಲ್ಲು, ಕಬ್ಬಿಣದ ಸಲಾಕೆ, ಕಾಂಕ್ರೀಟ್ ಮಿಶ್ರಣದ ತುಂಡಗಳನ್ನಿರಿಸಿ ರೈಲು ಹಳಿತಪ್ಪಿಸುವ ಸಂಚು ನಡೆದುಬರುತ್ತಿದ್ದು, ಇದುವರೆಗೆ ಆರೋಪಿಗಳ ಬಂಧನ ಸಾಧ್ಯವಾಗದಿರುವುದು ಘಟನೆ ಮರುಕಳಿಸಲು ಕಾರಣವಾಗುತ್ತಿದೆ. ಈ ಮಧ್ಯೆ ಕಾಸರಗೋಡು ಭಾಗದಲ್ಲಿ ರೈಲು ಹಳಿಯಲ್ಲಿ ಮಕ್ಕಳಾಟಿಕೆಯಿಂದ ಕಲ್ಲುಗಳನ್ನಿರಿಸಿರುವುದಾಗಿ ಬಿಂಬಿಸಲು ಕೆಲವರು ಯತ್ನಿಸುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.
ರೈಲು ವಿಧ್ವಂಸಕ ಕೃತ್ಯಗಳಿಗೆ ಸಂಚು: ರೈಲ್ವೆ ಸುರಕ್ಷಾ ಅಧಿಕಾರಿಗಳಿಂದ ತನಿಖೆ ಆರಂಭ
0
ಆಗಸ್ಟ್ 25, 2022
Tags