ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿಭಾನ್ವಿತರಿಗೆ ಸನ್ಮಾನ ಸಮಾರಂ¨ಭ ಆಯೋಜಿಸಲಾಯಿತು. ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.
ಸಚಿವ ಅಹ್ಮದ್ ದೇವರಕೋವಿಲ್ ಶಾಲು ಹೊದಿಸಿ ಸನ್ಮಾನಿಸಿದರು. .ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರಾಗಿ ಸಕ್ರಿಯವಾಗಿ ಹೋರಾಟ ನಡೆಸಿದ್ದ ಎ.ಕೆ ಗೋಪಾಲನ್(ಎಕೆಜಿ) ಪರವಾಗಿ ಅವರ ಪುತ್ರಿ ಲೈಲಾ ಅವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ ಕುಞÂಕಣ್ಣನ್ ನಂಬಿಯಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ, ದೇಶಿ ಗೋವುಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡುವ ಅತ್ಯುತ್ತಮ ಸಾವಯವ ಕೃಷಿಕ ಹಾಗೂ ಮಹಾತ್ಮ ದೇಶಸೇವಾ ಎಜುಕೇಶನಲ್ ಚಾರಿಟೀಸ್ ಟ್ರಸ್ಟ್‍ನ ಹರಿತಾಮೃತಂ ಪ್ರಶಸ್ತಿ ವಿಜೇತ ಪಿ.ಕೆ.ಲಾಲ್, ಡಿವೈಎಸ್ಪಿಗಳಾದ ಡಾ.ವಿ.ಬಾಲಕೃಷ್ಣನ್, ಪಿ.ಬಾಲಕೃಷ್ಣನ್ ನಾಯರ್, ಸಿ.ಕೆ.ಸುನೀಲ್ ಕುಮಾರ್, ವಿ.ವಿ.ಮನೋಜ್, ಮಾದಕ ಪದಾರ್ಥ ವರ್ಜನ ಮಿಷನ್ 'ವಿಮುಕ್ತಿ'ಯ ಕಾಸರಗೋಡು ಜಿಲ್ಲಾ ಸಂಯೋಜಕ ಹಾಗೂ ಮಾದಕ ವ್ಯಸನಿ ಮತ್ತು ಮದ್ಯಪಾನ ವಿರೋಧಿ ಹೋರಾಟದಲ್ಲಿ ಪ್ರಮುಖರಾದ ಎನ್.ಜಿ.ರಘುನಾಥನ್ ಅವರನ್ನು ಅಭಿನಂದಿಸಲಾಯಿತು. ರಘುನಾಥನ್ ಅವರು ಮೂರು ತಿಂಗಳಲ್ಲಿ 200 ಕ್ಕೂ ಹೆಚ್ಚು ಜಾಗೃತಿ ತರಗತಿಗಳನ್ನು ನಡೆಸುವ ಮೂಲಕ 50,000ಕ್ಕೂ ಹೆಚ್ಚು ಜನರಲ್ಲಿ ಮಾದಕದ್ರವ್ಯದ ಬಗ್ಗೆ ಜಾಗೃತಿ ಮೂಡಿಸಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಜಮೀಲಾ ಸಿದ್ದಿಕ್, ಜಾಸ್ಮಿನ್ ಕಬೀರ್ ಮೊದಲಾದವರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವ: ಜಿ.ಪಂನಿಂದ ಸ್ವಾತಂತ್ರ್ಯ ಹೋರಾಟಗಾರ, ವಿಶಿಷ್ಟ ಸಾಧಕರಿಗೆ ಸನ್ಮಾನ
0
ಆಗಸ್ಟ್ 17, 2022
Tags