ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಏಳು ದಿನಗಳ ಸಹವಾಸ ಶಿಬಿರ ಗುರುವಾರ ಆರಂಭಗೊಂಡಿತು. ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಸುಮೇಶ ಕಾತಿಲ್ ಶಿಬಿರದ ಚಟುವಟಿಕೆಗಳನ್ನು ವಿವರಿಸಿದರು. ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡುವ ಮೂಲಕ 'ಕಲ್ಪಕಂ' ಯೋಜನೆಗೆ ಚಾಲನೆ ನೀಡಲಾಯಿತು.
ಗ್ರಾ.ಪಂ. ಸದಸ್ಯೆ ಪ್ರೇಮಾ, ಪಿ.ಟಿ.ಎ ಅಧ್ಯಕ್ಷ ಅಹಮದ್ ಅಲಿ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರವಿ ಎಂ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ದಿವಾಕರನ್ ಕೆ ಸ್ವಾಗತಿಸಿ, ಸ್ವಯಂಸೇವಕ ನಾಯಕಿ ಫಿದಾ ಫಾತಿಮಾ ಎಂ. ಎಸ್ ವಂದಿಸಿದರು. ಶಿಬಿರ ಆ. 18 ರಂದು ಮುಕ್ತಾಯಗೊಳ್ಳಲಿದೆ.
ಕುಂಬಳೆಯಲ್ಲಿ ಏಳು ದಿನಗಳ ಎನ್.ಎಸ್.ಎಸ್. ಸಹವಾಸ ಶಿಬಿರ ಆರಂಭ
0
ಆಗಸ್ಟ್ 17, 2022