ಕಾಸರಗೋಡು: ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಳ ನ್ಯಾಯಾಲಯ ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರು ಕಾಯಂಗೊಳಿಸಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿದ್ದ ಎಂ. ರಾಜೇಶ್ ಮತ್ತು ಸೀನಿಯರ್ ಪೊಲೀಸ್ ಆಫೀಸರ್ ವಿಜಯನ್ ಅವರ ಮೇಲೆ ಮಂಗಲ್ಪಾಡಿ ಪ್ರತಾಪನಗರದಲ್ಲಿ 2012 ಜ. 22ರಂದು ತಂಡವೊಂದು ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರಮೀಸ್, ಕ್ವಾಟ್ರಸ್ ಮಾಲಿಕ ಆರಿಫ್ ಯಾನೆ ಅಪ್ಪು ಹಾಗೂ ಮಹಮ್ಮದ್ ರಫೀಕ್ ಯಾನೆ ರಫೀಕ್ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಕಾಸರಗೋಡಿನ ಅಸಿ. ಸೆಶನ್ಸ್ ನ್ಯಾಯಾಲಯ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂ. ದಂಡ ವಿಧಿಸಿತ್ತು. ಈ ಶಿಕ್ಷೆ ವಿರುದ್ಧ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.
ಪೊಲೀಸರಿಗೆ ಹಲ್ಲೆ: ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ವಿಚಾರಣಾ ನ್ಯಾಯಾಲಯ
0
ಆಗಸ್ಟ್ 05, 2022
Tags